ಬುದ್ಗಾಂ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಂ ಜಿಲ್ಲೆಯ ನಾರ್ಬಲ್ ಬ್ಲಾಕ್ನಲ್ಲಿರುವ ಸುಖ್ನಾಗ್ ನಲ್ಲಾ ಕವೂಸಾ ಪ್ರದೇಶದಿಂದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕನ ಮೃತ ದೇಹವನ್ನು ಭದ್ರತಾ ಪಡೆಗಳು ಶುಕ್ರವಾರ ವಶಪಡಿಸಿಕೊಂಡಿವೆ. ಶೋಪಿಯಾನ್ನ ಅಗ್ಲಾರ್ನ ಅಕಿಬ್ ಲೋನ್ ಎಂದು ಗುರುತಿಸಲ್ಪಟ್ಟ ಈ ಭಯೋತ್ಪಾದಕ ಸೆಪ್ಟೆಂಬರ್ 7 ರಂದು ಭದ್ರತಾ ಪಡೆಗಳ ಗುಂಡಿಗೆ ಗಾಯಗೊಂಡು ಬಳಿಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಬುದ್ಗಾಂನ ನಲ್ಲಾ ಕವೂಸದಲ್ಲಿ ಭದ್ರತಾ ಪಡೆಗಳು ಮದ್ದುಗುಂಡುಗಳನ್ನು ತುಂಬಿದ ಚೀಲವನ್ನು ಸಹ ವಶಪಡಿಸಿಕೊಂಡಿದ್ದಾರೆ. ಚೀಲದಲ್ಲಿ ಗ್ರೆನೇಡ್ ಮತ್ತು ಕೆಲವು ಮ್ಯಾಗಜೀನ್ಗಳು ಇದ್ದವು. 1 ಪೂರ್ಣ ಲೋಡ್ ಮಾಡಲಾದ ಎಕೆ ಮ್ಯಾಗಜೀನ್, 1 ಚೈನೀಸ್ ಗ್ರೆನೇಡ್, 1 ಚಾಕು, 2 ಮೊಬೈಲ್ ಫೋನ್ ಮತ್ತು ಫೆರನ್ (ಕಾಶ್ಮೀರಿ ಗೌನ್) ಅನ್ನು ಚೀಲದಿಂದ ವಶಪಡಿಸಿಕೊಳ್ಳಲಾಗಿದೆ.
ಸೆಪ್ಟೆಂಬರ್ 7 ರಂದು, ಮಧ್ಯ ಕಾಶ್ಮೀರದ ಬುದ್ಗಾಂ ಜಿಲ್ಲೆಯ ಕಾವೂಸಾ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ, ಭದ್ರತಾ ಪಡೆಗಳು ಅಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಶೋಧ ತಂಡದ ಮೇಲೆ ಉಗ್ರರು ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ ಆಗಿ ಮಾರ್ಪಟ್ಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ಆರಂಭಿಕ ಚಕಮಕಿಯ ನಂತರ, ಎನ್ಕೌಂಟರ್ ಸ್ಥಳದ ಬಳಿ ಘರ್ಷಣೆಗಳು ಸಂಭವಿಸಿವೆ. ಭದ್ರತಾ ಪಡೆಗಳ ಮೇಲೆ ಯುವಕರ ಗುಂಪುಗಳು ಕಲ್ಲು ತೂರಾಟ ನಡೆಸಿವೆ, ಈ ವೇಳೆ ಅಶ್ರುವಾಯು ಹಾರಿಸುವ ಮೂಲಕ ಪ್ರತಿಭಟನಾಕಾರರನ್ನು ಓಡಿಸಲಾಗಿದೆ. ಘರ್ಷಣೆಯಲ್ಲಿ ಯಾವುದೇ ಹಾನಿಯ ಬಗ್ಗೆ ವರದಿಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಭಯೋತ್ಪಾದಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.ಅವರು ತಪ್ಪಿಸಿಕೊಂಡ ನಂತರ, ಆ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.