Thursday, July 30th, 2015
Admin
ಬಾಗ್ದಾದ್: ಅಫ್ಘಾನಿಸ್ಥಾನದ ಅತ್ಯಂತ ಕ್ರೂರ ಉಗ್ರ ಸಂಘಟನೆ ತಾಲಿಬಾನಿನ ಮುಖ್ಯಸ್ಥ ಮುಲ್ಲಾ ಒಮರ್ 2 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ.
ಅಫ್ಘಾನಿಸ್ಥಾನದ ಉನ್ನತ ಮೂಲಗಳಿಂದ ಈ ವಿಷಯವನ್ನು ಖಾತ್ರಿಪಡಿಸಿಕೊಂಡು ವರದಿ ಪ್ರಸಾರ ಮಾಡಿದ್ದಾಗಿ ಬಿಬಿಸಿ ಹೇಳಿಕೊಂಡಿದೆ. 2013ರಲ್ಲೇ ಮುಲ್ಲಾ ಪಾಕಿಸ್ಥಾನದ ಕರಾಚಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಅಫ್ಘಾನಿಸ್ಥಾನದ ಗುಪ್ತಚರ ಇಲಾಖೆಗಳು ಸ್ಪಷ್ಟಪಡಿಸಿವೆ ಎನ್ನಲಾಗಿದೆ.
ಈ ಬಗೆಗಿನ ಸೂಕ್ತ ದಾಖಲೆಗಳನ್ನು ಅದು ಶೀಘ್ರದಲ್ಲೇ ಬಿಡುಗಡೆ ಮಾಡಿ, ತನಿಖೆ ನಡೆಸುವ ಸಾಧ್ಯತೆಯೂ ಇದೆ.
ಆದರೆ ತಾಲಿಬಾನ್ ಮಾತ್ರ ಮುಲ್ಲಾನ ಸಾವಿನ ವರದಿಯನ್ನು ತಳ್ಳಿ ಹಾಕಿದೆ.