ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಪಿತೂರಿಯಲ್ಲಿ ರಿಯಾ ಚಕ್ರವರ್ತಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮಂಗಳವಾರ ಬಂಧಿಸಿದೆ. ನಟಿಗೆ ಸತತ ಮೂರನೇ ದಿನ ಎನ್ಸಿಬಿ ಸಮನ್ಸ್ ನೀಡಿತ್ತು.
ರಿಯಾ ಅವರನ್ನು ಮೊದಲ ದಿನ 6 ಗಂಟೆ ವಿಚಾರಣೆ ನಡೆಸಲಾಗಿತ್ತು ಮತ್ತು 2ನೇ ದಿನ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಕಿರಿಯ ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸುಶಾಂತ್ ಅವರ ಇಬ್ಬರು ಆಪ್ತರಾದ ಸ್ಯಾಮ್ಯುಯೆಲ್ ಮಿರಾಂಡಾ ಮತ್ತು ದೀಪೇಶ್ ಸಾವಂತ್ ಮತ್ತು ಇನ್ನೂ ಕೆಲವರನ್ನು ಎನ್ಸಿಬಿ ಈಗಾಗಲೇ ಬಂಧಿಸಿದೆ.
ವರದಿಯ ಪ್ರಕಾರ, ರಿಯಾ ಎನ್ಸಿಬಿಯ ಮುಂದೆ ತಾನು ಗಾಂಜಾ ತುಂಬಿದ ಸಿಗರೇಟು ಸೇದುತ್ತಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಮಾದಕ ದ್ರವ್ಯ ತುಂಬಿದ ಸಿಗರೇಟ್ ಸೇದುತ್ತಿದ್ದೆ ಎಂದು ರಿಯಾ ಎನ್ಸಿಬಿ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸುಶಾಂತ್ ಅವರು 2016 ರಿಂದ ಡ್ರಗ್ಸ್ ಸೇವಿಸುತ್ತಿದ್ದಾರೆ ಎಂದು ರಿಯಾ ಹೇಳಿದ್ದಾಳೆ ಎನ್ನಲಾಗಿದೆ.
ನಟಿ ಎನ್ಸಿಬಿ ವಶಕ್ಕೆ ತೆಗೆದುಕೊಳ್ಳುವ ಮೊದಲು ಕೊರೊನಾವೈರಸ್ ಪರೀಕ್ಷೆ ಸೇರಿದಂತೆ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದಾರೆ.
ನಟ ಸುಶಾಂತ್ ಸಾವಿನ ತನಿಖೆ ಹೊಸ ಹೊಸ ಆಯಾಮಗಳತ್ತ ತಿರುಗಿಕೊಳ್ಳುತ್ತಿದ್ದು, ಇದೀಗ ಡ್ರಗ್ಸ್ ವಿಚಾರ ಹೆಚ್ಚು ಮುನ್ನಲೆಗೆ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.