ವಿಶ್ವಸಂಸ್ಥೆ: ಈಗಾಗಲೇ ವಿವಿಧ ರಾಷ್ಟ್ರಗಳ ಹಲವು ಕಂಪೆನಿಗಳು ಕೋವಿಡ್ಗೆ ಲಸಿಕೆಗಳನ್ನು ಸಿದ್ಧಪಡಿಸಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿವೆ. ಇಂತಹ ವೇಳೆಯಲ್ಲಿ ಯುನಿಸೆಫ್ ಸಂಸ್ಥೆಯು ಈ ಲಸಿಕೆಗಳನ್ನು ಖರೀದಿ ಮಾಡಿ ಎಲ್ಲ ರಾಷ್ಟ್ರಗಳಿಗೂ ಹೆಚ್ಚು ವೇಗವಾಗಿ ಮತ್ತು ಸಮಾನಾಗಿ ಈ ಲಸಿಕೆಗಳನ್ನು ತಲುಪಿಸುವುದಾಗಿ ತಿಳಿಸಿದೆ.
ಯುನಿಸೆಫ್ ಅಥವಾ ವಿಶ್ವಸಂಸ್ಥೆಯ ಮಕ್ಕಳ ನಿಧಿ ಪ್ರಕಟಿಸಿರುವ ಲಸಿಕೆ ಖರೀದಿ ಮತ್ತು ಪೂರೈಕೆ ಪ್ರಕ್ರಿಯೆ ವಿಶ್ವದಲ್ಲಿಯೇ ಅತೀ ದೊಡ್ಡ ಮಟ್ಟದ ಕ್ರಮವಾಗಿ ಹೆಸರು ಪಡೆಯುವ ಸಾಧ್ಯತೆ ಇದೆ. ಈ ಸಂಸ್ಥೆ ವಿಶ್ವದಲ್ಲಿಯೇ ಅತೀ ದೊಡ್ಡ ಮಟ್ಟದಲ್ಲಿ ಲಸಿಕೆ ಖರೀದಿಸುವ ಸಂಸ್ಥೆ ಎಂಬ ಹೆಸರನ್ನೂ ಗಳಿಸಿದೆ. ವರ್ಷಂಪ್ರತಿ ಯುನಿಸೆಫ್ 2 ಬಿಲಿಯನ್ ಡೋಸ್ಗಳಷ್ಟು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲಸಿಕೆಗಳನ್ನು ಖರೀದಿ ಮಾಡುವ ಮೂಲಕವೂ ಈಗಾಗಲೇ ಹೆಸರು ಪಡೆದಿದೆ.
ಸದ್ಯ ಯುನಿಸೆಫ್ ಪಾನ್ ಅಮೆರಿಕಾ ಹೆಲ್ತ್ ಆರ್ಗನೈಸೇಷನ್ ಸೇರಿದಂತೆ ವಿವಿಧ ಕಂಪೆನಿಗಳ ಸಹಯೋಗದಲ್ಲಿ ಕೋವ್ಯಾಕ್ಸ್ ಗ್ಲೋಬಲ್ ವ್ಯಾಕ್ಸಿನ್ ಫೆಸಿಲಿಟಿ ಎಂಬ ಯೋಜನೆಯ ಮೂಲಕ ಕೊರೋನಾ ಲಸಿಕೆಗಳನ್ನು ಖರೀದಿಸಿ, ಆರ್ಥಿಕವಾಗಿ ಬಡವರಾಗಿರುವ 92 ರಾಷ್ಟ್ರಗಳಿಗೆ ಲಸಿಕೆಯನ್ನು ಒದಗಿಸಲು ಮುಂದಾಗಿದೆ. ಈ ಪ್ರಕ್ರಿಯೆಗೆ ಹಲವು ಸಂಸ್ಥೆಗಳೂ ಕೈ ಜೋಡಿಸಲು ಮುಂದಾಗಿವೆ. ಈ ಕೊವ್ಯಾಕ್ಸ್ ಫೆಸಿಲಿಟಿಯಲ್ಲಿ ಭಾಗಿಗಳಾಗಲು ಎಲ್ಲಾ ದೇಶಗಳಿಗೂ ಮುಕ್ತ ಅವಕಾಶ ನೀಡಲಾಗಿದೆ. ಯಾವ ಕಾರಣದಿಂದಲೂ ಕೊರೋನಾ ಲಸಿಕೆ ಪಡೆಯುವಲ್ಲಿ ಯಾವ ರಾಷ್ಟ್ರವೂ ಹಿಂದುಳಿಯಬಾರದು ಎಂಬ ನಿಟ್ಟಿನಲ್ಲಿ ಈ ರೀತಿಯ ವ್ಯವಸ್ಥೆಯನ್ನು ಯುನಿಸೆಫ್ ಮಾಡಿದೆ.
ಯುನಿಸೆಫ್ನ ಈ ಯೋಜನೆಯ ಮೂಲಕ ಹೆಚ್ಚು ಆದಾಯ ಗಳಿಸುವ 80 ರಾಷ್ಟ್ರಗಳು ಲಸಿಕೆ ಖರೀದಿಯ ಸಂಯೋಜಕರಾಗಿ ಕೆಲಸ ಮಾಡಲು ಆಸಕ್ತಿ ತೋರಿವೆ. ತಮ್ಮ ಸ್ವಂತ ಆರ್ಥಿಕತೆಯನ್ನು ಬಳಸಿ ಲಸಿಕೆಗಳನ್ನು ಖರೀದಿ ಮಾಡುವುದಾಗಿಯೂ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ, ಗವಿ ದಿ ವ್ಯಾಕ್ಸಿನ್ ಅಲಯನ್ಸ್, ಸಿಇಪಿಐ, ವಿಶ್ವ ಬ್ಯಾಂಕ್ ಸೇರಿದಂತೆ ಇನ್ನಿತರ ಪಾಲುದಾರರ ಸಹಯೋಗದಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಯುನಿಸೆಫ್ ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.