ನವದೆಹಲಿ: 1993ರ ಸರಣಿ ಸ್ಫೋಟದ ಅಪರಾಧಿ, 250ಕ್ಕೂ ಅಧಿಕ ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡ ಯಾಕೂಬ್ ಮೆಮೋನ್ನನ್ನು ಗಲ್ಲಿಗೇರಿಸಿದ್ದಕ್ಕೆ ಮರುಕ ಪಡುವ ಹಲವಾರು ಮಂದಿ ನಮ್ಮ ದೇಶದಲ್ಲಿದ್ದಾರೆ. ಅವರಲ್ಲಿ ಒಬ್ಬ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್.
ಸ್ಫೋಟ ನಡೆದ 22 ವರ್ಷ ಬಳಿಕ ಇಂದು ನಾಗ್ಪುರ ಜೈಲಿನಲ್ಲಿ ಯಾಕುಬ್ಗೆ ಮರಣದಂಡನೆ ವಿಧಿಸಲಾಗಿದೆ. ಈ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿ ಟ್ವಿಟ್ ಮಾಡಿರುವ ದಿಗ್ವಿಜಯ್, ‘ಯಾಕುಬ್ನನ್ನು ಗಲ್ಲಿಗೇರಿಸಲಾಗಿದೆ, ಉಗ್ರ ಆರೋಪಿಯನ್ನು ಶಿಕ್ಷಿಸುವುದರಲ್ಲಿ ಅತೀವ ತುರ್ತು ಮತ್ತು ಬದ್ಧತೆಯನ್ನು ಸರ್ಕಾರ ಮತ್ತು ನ್ಯಾಯಾಂಗ ತೋರಿದೆ’ ಎಂದಿದ್ದಾರೆ.
ಅಷ್ಟೇ ಅಲ್ಲ, ಎಪಿಜೆ ಅಬ್ದುಲ್ ಕಲಾಂ ಮತ್ತು ಯಾಕೂಬ್ ಸಾವನ್ನು ಹೋಲಿಕೆ ಮಾಡಿ, ’ಎಂಥಾ ಆಕಸ್ಮಿಕ, ಇಬ್ಬರು ಮುಸ್ಲಿಂರ ಅಂತ್ಯಸಂಸ್ಕಾರ ಒಂದೇ ದಿನ, ಕಲಾಂ ಅವರು ತಮ್ಮ ಸಾಧನೆಗಳಿಂದ ಈ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ’ ಎಂದಿದ್ದಾರೆ.
ಅವರ ಈ ಟ್ವಿಟ್ ಹಲವಾರು ಮಂದಿಯನ್ನು ಆಕ್ರೋಶಿತಗೊಳಿಸಿದೆ. ನ್ಯಾಯಾಂಗದ ಬಗ್ಗೆ ತುಸು ಗೌರವ ತೋರಿ ಮಾತನಾಡಿ, ನಿಮ್ಮ ನಾಲಗೆಯ ಮೇಲೆ ಹಿಡಿತವಿರಲಿ, ನೀವು ನಿಧಾನವಾಗಿ ಭಯೋತ್ಪಾದಕರನ್ನು ಇಷ್ಟಪಡುತ್ತಿದ್ದೀರಿ, ಗಲ್ಲಿಗೇರಿದವನು ಮುಸ್ಲಿಂ ಎಂಬ ಕಾರಣಕ್ಕಾಗಿ ನೀವು ಬೇಸರಗೊಂಡಿದ್ದೀರಾ? ಎಂದೆಲ್ಲಾ ದಿಗ್ವಿಜಯ್ ಅವರಿಗೆ ಟ್ವಿಟರ್ ಹಿಂಬಾಲಕರು ಪ್ರಶ್ನೆಗಳನ್ನು ಕೇಳಿದ್ದಾರೆ.
ಅಬ್ಬಾ! ದೇಶದ್ರೋಹಿ ಸತ್ತಾಗಲೂ ಇಷ್ಟೊಂದು ಅನುಕಂಪ ವ್ಯಕ್ತಪಡಿಸುವ ಜನರಿರುವುದು ಭಾರತದಲ್ಲೇ ಅನಿಸುತ್ತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.