ಗಂಗ್ಟೋಕ್: ಉತ್ತರ ಸಿಕ್ಕಿಂನ ಬರಡು ಪ್ರದೇಶದಲ್ಲಿ 17,500 ಅಡಿ ಎತ್ತರದಲ್ಲಿ ದಾರಿ ತಪ್ಪಿದ ಮೂವರು ಚೀನಾದ ಪ್ರಜೆಗಳನ್ನು ಭಾರತೀಯ ಸೇನೆಯು ರಕ್ಷಿಸಿದೆ ಮತ್ತು ತಕ್ಷಣ ಅವರಿಗೆ ವೈದ್ಯಕೀಯ ನೆರವು ನೀಡಿದೆ. ಈ ಘಟನೆ ಸೆಪ್ಟೆಂಬರ್ 3 ರಂದು ನಡೆದಿತ್ತು.
ರಕ್ಷಿಸಲ್ಪಟ್ಟ ಚೀನಾದ ನಾಗರಿಕರಿಗೆ ಯೋಧರು ಆಮ್ಲಜನಕ, ಆಹಾರ ಮತ್ತು ಬಟ್ಟೆಗಳನ್ನು ಒದಗಿಸಿದ್ದಾರೆ ಮತ್ತು ಅವರಿಗೆ ತಮ್ಮ ಊರಿಗೆ ಮರಳಲು ಸೂಕ್ತ ಮಾರ್ಗದರ್ಶನ ನೀಡಿದರು ಎಂದು ಭಾರತೀಯ ಸೇನೆ ಹೇಳಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಭಾರತೀಯ ಸೇನೆ, “ಮಾನವೀಯತೆ ಎಲ್ಲದಕ್ಕಿಂತಲೂ ಮಿಗಿಲು. ಭಾರತೀಯ ಸೇನೆ ಭಾರತದಲ್ಲಿ ಸಿಕ್ಕಿಬಿದ್ದ ಚೀನಾ ನಾಗರಿಕರಿಗೆ ಸಹಾಯ ಮತ್ತು ವೈದ್ಯಕೀಯ ನೆರವು ನೀಡಿದೆ. ತೀವ್ರ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ 17,500 ಅಡಿ ಎತ್ತರದಲ್ಲಿ ನಾರ್ತ್ ಸಿಕ್ಕಿಂನ ಚೀನಾ ಗಡಿ ಸಮೀಪ ಇವರು ಸಿಕ್ಕಿಬಿದ್ದಿದ್ದರು.” ಎಂದಿದೆ.
मानवता सर्वोपरि#IndianArmy extends help and #Medical assistance to stranded #Chinese citizens at the India – China Border of #NorthSikkim at altitude of 17,500 feet under extreme climatic conditions.
For #IndianArmy #Humanity is foremost#HumanValues#IndianArmy#NationFirst pic.twitter.com/mdW7Tka0wo
— ADG PI – INDIAN ARMY (@adgpi) September 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.