ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೆಪ್ಟೆಂಬರ್ 1, 2020ರಂದು ಜಿಎಸ್ಆರ್ 541 (ಇ) ಕರಡು ಅಧಿಸೂಚನೆಯ ಮೂಲಕ, ಡಿಸೆಂಬರ್ 1, 2017ಕ್ಕೂ ಮೊದಲು ಮಾರಾಟ ಮಾಡಿರುವ ಹಳೆಯ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸುವಿಕೆ ವಿಚಾರದ ಕುರಿತಂತೆ ಸಂಬಂಧಿಸಿದವರ ಸಲಹೆ ಸೂಚನೆಗಳನ್ನು ಆಹ್ವಾನಿಸಿದೆ.
2021 ರ ಜನವರಿ 1 ರಿಂದ ತೊಡಗಿದಂತೆ ತಿದ್ದುಪಡಿಗೊಳಪಟ್ಟಿರುವ ಸಿಎಂವಿಆರ್ 1989 ಕಾಯ್ದೆಯ ಅಂಶಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಾಗಿದೆ. ತಿದ್ದುಪಡಿ ಮಾಡಲ್ಪಟ್ಟಿರುವ ನಮೂನೆ ಸಂಖ್ಯೆ 51 (ವಿಮಾ ಪ್ರಮಾಣಪತ್ರ)ದಲ್ಲಿ ಮೂರನೇ ವ್ಯಕ್ತಿಗೆ ವಿಮೆ ಮಾಡಿಸಬೇಕಾದಲ್ಲಿ ಫಾಸ್ಟ್ ಟ್ಯಾಗ್ ಹೊಂದಿರುವುದನ್ನು ಕಡ್ಡಾಯ ಮಾಡಲು ಉದ್ದೇಶಿಸಲಾಗಿದೆ. ಈ ಕಾನೂನನ್ನು 2021 ರ ಎಪ್ರಿಲ್ ತಿಂಗಳ 1 ರಿಂದ ತೊಡಗಿದಂತೆ ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಲಾಗುವುದಾಗಿಯೂ ಸಚಿವಾಲಯ ತಿಳಿಸಿದೆ.
2017 ರಿಂದೀಚೆಗೆ ಖರೀದಿಸಲಾದ ನಾಲ್ಕು ಚಕ್ರದ ಹೊಸ ವಾಹನಗಳ ನೋಂದಣಿಗೆ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಅದನ್ನು ವಾಹನದ ಉತ್ಪಾದಕರು ಅಥವಾ ಡೀಲರ್ಗಳು ಒದಗಿಸಲು ಪೂರಕ ಕ್ರಮ ತೆಗೆದುಕೊಳ್ಳಬೇಕು. ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ನವೀಕರಣಕ್ಕೂ ಫಾಸ್ಟ್ ಟ್ಯಾಗ್ ಹೊಂದಿರುವುದು ಕಡ್ಡಾಯ. ಅಕ್ಟೋಬರ್ 1,2019 ರಿಂದೀಚೆಗೆ ರಾಷ್ಟ್ರೀಯ ಅನುಮತಿ ಹೊಂದಿರುವ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ಸಚಿವಾಲಯ ಹೇಳಿದೆ. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನು ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.