ನವದೆಹಲಿ: ಕಳೆದ 24 ಗಂಟೆಗಳಲ್ಲಿ 11 ಲಕ್ಷ 72 ಸಾವಿರ ಕೋವಿಡ್ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಭಾರತ ಸಾಧನೆ ಮಾಡಿದೆ. ಒಂದೇ ದಿನದಲ್ಲಿ ಅತಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಿದ ಮೈಲಿಗಲ್ಲನ್ನು ಸಾಧಿಸಿದೆ. ಕಳೆದ 5 ತಿಂಗಳುಗಳಲ್ಲಿ ದೇಶವು ತನ್ನ ಕೋವಿಡ್ ಪರೀಕ್ಷಾ ಸಾಮರ್ಥ್ಯದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ.
ಈ ವರ್ಷದ ಮಾರ್ಚ್ 23 ರಂದು ಕೋವಿಡ್ ಮಾದರಿಗಳನ್ನು ಪರೀಕ್ಷಿಸಲು ಭಾರತದಲ್ಲಿ ಕೇವಲ 160 ಲ್ಯಾಬ್ಗಳಿದ್ದವು, ದೇಶವು ಇಂದು 1,623 ಲ್ಯಾಬ್ಗಳನ್ನು ಹೊಂದಿದೆ. ಇದರಲ್ಲಿ 1022 ಸರ್ಕಾರಿ ಪ್ರಯೋಗಾಲಯಗಳು, ಉಳಿದ 601 ಖಾಸಗಿ ಪ್ರಯೋಗಾಲಯಗಳು.
ಇಲ್ಲಿಯವರೆಗೆ, ಒಟ್ಟು 4 ಕೋಟಿ 55 ಲಕ್ಷ 9 ಸಾವಿರ 380 ಪರೀಕ್ಷೆಗಳನ್ನು ಭಾರತ ನಡೆಸಿದೆ. ರಾಷ್ಟ್ರವು ಸಕಾರಾತ್ಮಕ ಪ್ರಕರಣಗಳ ದರವನ್ನು ಶೇಕಡಾ 8.5 ರಷ್ಟರಲ್ಲಿ ಉಳಿಸಿಕೊಳ್ಳಲು ಸಮರ್ಥವಾಗಿದೆ. ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್ ಮತ್ತು ಮಧ್ಯಪ್ರದೇಶಗಳಲ್ಲಿ ಸಕಾರಾತ್ಮಕ ಪ್ರಮಾಣವು ಶೇಕಡಾ 5 ಕ್ಕಿಂತಲೂ ಕಡಿಮೆಯಾಗಿದೆ. ಸಮಯೋಚಿತ ಪತ್ತೆ ಮತ್ತು ಪರೀಕ್ಷೆಯ ಕಾರಣದಿಂದ ಮರಣ ಪ್ರಮಾಣ ಕೂಡ ಕಡಿಮೆ ಇದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 68,584 ಕೋವಿಡ್ ರೋಗಿಗಳು ಚೇತರಿಸಿಕೊಂಡಿದ್ದಾರೆ. ಒಟ್ಟಾರೆ ಚೇತರಿಕೆ ದರವು ಅದರ ಮೇಲ್ಮುಖ ಪ್ರವೃತ್ತಿಯನ್ನು ಕಾಯ್ದುಕೊಂಡಿದೆ ಮತ್ತು ಈಗ ಶೇಕಡಾ 77.09 ಕ್ಕೆ ತಲುಪಿದೆ. ಇಲ್ಲಿಯವರೆಗೆ, ದೇಶದಲ್ಲಿ ಸುಮಾರು 3 ಮಿಲಿಯನ್ ಜನರು ಸಾಂಕ್ರಾಮಿಕದಿಂದ ಚೇತರಿಸಿಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 83,883 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದು, ಭಾರತದ ಒಟ್ಟು ಕೋವಿಡ್ ಪ್ರಕರಣ 38 ಲಕ್ಷದ ಗಡಿ ದಾಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.