ಚೆನ್ನೈ: ವಿಶ್ವದೆಲ್ಲೆಡೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಮೋ ಜನಪ್ರಿಯತೆಯನ್ನೇ ಬಳಕೆ ಮಾಡಿ ತಮಿಳುನಾಡಿನಲ್ಲಿನ್ನು 10 ರೂ.ಗಳಿಗೆ 4 ಇಡ್ಲಿ ಗಳಂತೆ, ಕಡಿಮೆ ಬೆಲೆಗೆ ಹೊಟ್ಟೆ ತುಂಬಾ ಹಿಟ್ಟು ನೀಡುವ ನಿಟ್ಟಿನಲ್ಲಿ ರಾಜ್ಯದ ಬಿಜೆಪಿ ನಾಯಕ ಮಹೇಶ್ ‘ಮೋದಿ ಇಡ್ಲಿ’ ಆರಂಭಿಸಲು ಮುಂದಾಗಿದ್ದಾರೆ.
ಈ ಸಂಬಂಧ ಈಗಾಗಲೇ ಸೇಲಂ ನಗರದ ವಿವಿಧ ಕಡೆಗಳಲ್ಲಿ ‘ಮೋದಿ ಇಡ್ಲಿ’ ಪೋಸ್ಟರ್ಗಳನ್ನು ಮಹೇಶ್ ಹಾಕಿಸಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಮೋದಿ ಇಡ್ಲಿ ಸಾಕಷ್ಟು ಪ್ರಚಾರವನ್ನು ಗಳಿಸಿದೆ. ಸಾಂಬಾರ್ ಮತ್ತು ಚಟ್ನಿ ಜೊತೆಗೆ ಮೋದಿ ಹೆಸರಲ್ಲಿ 4 ಇಡ್ಲಿಗಳನ್ನು ನೀಡಲಾಗುತ್ತದೆ ಎಂದೂ ಮಹೇಶ್ ಈಗಾಗಲೇ ಮಾಹಿತಿ ನೀಡಿದ್ದಾರೆ.
ಸೇಲಂನಲ್ಲಿ ಈ ಕಾರ್ಯವನ್ನು ಆರಂಭ ಮಾಡಲಾಗುತ್ತಿದ್ದು, ನಗರದ 20-25 ಅಂಗಡಿಗಳಲ್ಲಿ ಮೋದಿ ಇಡ್ಲಿ ಸಿಗಲಿದೆ. ಕೆಲವು ದಿನಗಳ ಬಳಿಕ ಇಡೀ ನಗರದಲ್ಲಿ ಮೋದಿ ಇಡ್ಲಿ ದೊರೆಯಲು ಪೂರಕ ವ್ಯವಸ್ಥೆ ಕೈಗೊಳ್ಳುವುದಾಗಿಯೂ ಅವರು ಹೇಳಿದ್ದಾರೆ. ಪ್ರತಿನಿತ್ಯ 40 ಸಾವಿರ ಇಡ್ಲಿ ತಯಾರಿಸಲಾಗುತ್ತದೆ. ಹಾಗೆಯೇ ತಾಜಾ ತರಕಾರಿಗಳನ್ನು ಬಳಸಿ ಸಾಂಬಾರ್ ತಯಾರಿಸಲಾಗುತ್ತದೆ. ಈ ಇಡ್ಲಿಯ ರುಚಿಯೇ ವಿಶೇಷವಾಗಿರಲಿದ್ದು, ಇದು ಜನಮಾನಸದಲ್ಲಿ ನೆಲೆಯೂರಲಿದೆ ಎಂದು ಅವರು ಹೇಳಿದ್ದಾರೆ. ಮುಂದಿನ ವಾರದಿಂದಲೇ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಮಹೇಶ್ ತಿಳಿಸಿದ್ದಾರೆ.
This is our Idly coupon , coupon size
14.5 cm x 6.75 cmRear side of this coupon we have space for advertisement. Rs 1 per coupon , minimum 50k coupons per advertiser . Those interested kindly DM Me 🙏🏻 pic.twitter.com/JSZFIwNjmj
— Mahesh 🇮🇳 (@Mahesh10816) August 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.