ನವದೆಹಲಿ: ಪ್ರಸ್ತುತ ಹಣಕಾಸು ವರ್ಷದ ಏಪ್ರಿಲ್ನಿಂದ ಆಗಸ್ಟ್ ಅವಧಿಯಲ್ಲಿ ಕಳೆದ ಮೂರು ವರ್ಷಗಳಲ್ಲೇ ಅತೀ ಹೆಚ್ಚಿನ ಉದ್ದದ ಹೆದ್ದಾರಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಸೋಮವಾರ ಬಹಿರಂಗಪಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ಇದೇ ಅವಧಿಗೆ ಹೋಲಿಸಿದರೆ ಅತಿ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಈ ಬಾರಿ ನೀಡಲಾಗಿದೆ.
ಈ ಬಾರಿ, 744 ಕಿಲೋಮೀಟರ್ ಉದ್ದವನ್ನು ಒಳಗೊಂಡ ಒಟ್ಟು 26 ಯೋಜನೆಗಳಿಗೆ ಎನ್ಎಚ್ಎಐ ಗುತ್ತಿಗೆಗಳನ್ನು ನೀಡಿದೆ, ಇವುಗಳ ವೆಚ್ಚ 31,000 ಕೋಟಿ ರೂ.ಆಗಿದೆ. 2019-20ನೇ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ನೀಡಲಾದ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆಗಳ ಉದ್ದ 676 ಕಿಲೋಮೀಟರ್. 2018-19 ಮತ್ತು 2017-18ರಲ್ಲಿ ನೀಡಲಾದ ಹೆದ್ದಾರಿ ಉದ್ದಗಳು ಕ್ರಮವಾಗಿ 368 ಕಿಲೋಮೀಟರ್ ಮತ್ತು 504 ಕಿಲೋಮೀಟರ್ ಆಗಿದೆ.
ಸಂಕಷ್ಟದ ಈ ಸಮಯದಲ್ಲಿ ಈ ವಲಯದ ವಿಶ್ವಾಸವನ್ನು ಹೆಚ್ಚಿಸಲು ಮತ್ತು ಗುತ್ತಿಗೆದಾರರಿಗೆ ಹಣದ ಹರಿವನ್ನು ಖಚಿತಪಡಿಸಿಕೊಳ್ಳಲು, ಯಾವುದೇ ಪಾವತಿಗಳು ವಿಳಂಬವಾಗುವುದಿಲ್ಲ ಎಂಬುದನ್ನು ಎನ್ಎಚ್ಎಐ ಖಚಿತಪಡಿಸಿತು ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಂಡು ಮಾರ್ಚ್ 2020 ರಲ್ಲಿ ಲಾಕ್ಡೌನ್ ಸಮಯದಲ್ಲಿ ಒಟ್ಟು 10,000 ಕೋಟಿ ರೂ.ಪಾವತಿ ಮಾಡಿತು. ಇದಲ್ಲದೆ, ಹಣಕಾಸು ವರ್ಷದ 20-21ರ ಮೊದಲ ತ್ರೈಮಾಸಿಕದಲ್ಲಿ, ಎನ್ಎಚ್ಎಐ 15,000 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ವಿತರಿಸಿದೆ. ಗುತ್ತಿಗೆದಾರರಿಗೆ ಮಾಸಿಕ ಪಾವತಿಯಂತಹ ಹೆಚ್ಚುವರಿ ಹಂತಗಳನ್ನು ಸಹ ಜಾರಿಗೆ ತರಲಾಯಿತು.
ಎನ್ಎಚ್ಎಐ ಪ್ರಕಾರ, ಮೇಲೆ ತಿಳಿಸಲಾದ ಈ ಕ್ರಮಗಳು ಬಿಡ್ಡುದಾರರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿದವು, ಇದರ ರಸ್ತೆ ವಲಯದ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕಾಗಿ ಎನ್ಎಚ್ಎಐ ನೀಡಿರುವ ಯೋಜನೆಗಳಲ್ಲಿನ ಹೆಚ್ಚಳವು ಆರ್ಥಿಕತೆಗೆ ಪ್ರಮುಖ ಉತ್ತೇಜನವಾಗಿದೆ ಮತ್ತು ಇದು ಮೂಲಸೌಕರ್ಯ ನಿರ್ಮಾಣದ ಹೂಡಿಕೆಯನ್ನು ಹೆಚ್ಚಿಸುತ್ತದೆ. ಆರ್ಥಿಕತೆಯು ಬೆಳವಣಿಗೆಯ ಹಾದಿಗೆ ಮರಳುವುದನ್ನು ಖಾತ್ರಿಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.