ನವದೆಹಲಿ: ಸೆಂಟರ್ ಫಾರ್ ಸೈನ್ಸ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಅಡಿಯಲ್ಲಿರುವ ಸೆಂಟ್ರಲ್ ಮೆಕ್ಯಾನಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಎಂಇಆರ್ಐ) ವಿಶ್ವದ ಅತಿದೊಡ್ಡ ಸೌರ ವೃಕ್ಷವನ್ನು ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಅಭಿವೃದ್ಧಿಪಡಿಸಿದೆ ಮತ್ತು ಸ್ಥಾಪಿಸಿದೆ.
ದುರ್ಗಾಪುರದ ಸಿಎಸ್ಐಆರ್-ಸಿಎಂಇಆರ್ಐ ರೆಸಿಡೆನ್ಶಿಯಲ್ ಕಾಲೋನಿಯಲ್ಲಿ ಸ್ಥಾಪಿಸಲಾದ ಸೌರ ವೃಕ್ಷವು 11.5 ಕಿಲೋ ವ್ಯಾಟ್ (ಕೆಡಬ್ಲ್ಯೂಪಿ) ಗರಿಷ್ಠ ಶಕ್ತಿಯನ್ನು ಉತ್ಪಾದಿಸಬಲ್ಲದು.
ಸಿಎಸ್ಐಆರ್-ಸಿಎಂಇಆರ್ಐ ನಿರ್ದೇಶಕ ಪ್ರೊಫೆಸರ್ ಹರೀಶ್ ಹಿರಾನಿ ಹೇಳಿಕೆಯ ಪ್ರಕಾರ, “ಸೌರ ವೃಕ್ಷದ ಸ್ಥಾಪಿತ ಸಾಮರ್ಥ್ಯ 11.5 ಕಿಲೋ ವ್ಯಾಟ್. ಇದು 12,000-14,000 ಯುನಿಟ್ ಕ್ಲೀನ್ ಮತ್ತು ಗ್ರೀನ್ ಪವರ್ ಉತ್ಪಾದಿಸುವ ವಾರ್ಷಿಕ ಸಾಮರ್ಥ್ಯವನ್ನು ಹೊಂದಿದೆ ”.
ಪ್ರತಿ ಸೌರ ದ್ಯುತಿವಿದ್ಯುಜ್ಜನಕ (ಪಿವಿ) ಫಲಕವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಕೆಳಗಿರುವ ಕನಿಷ್ಠ ಪ್ರಮಾಣದ ನೆರಳು ಪ್ರದೇಶವನ್ನು ಸೃಷ್ಟಿಸಲು ಸೌರ ವೃಕ್ಷವನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ವೃಕ್ಷದಲ್ಲಿ ಒಟ್ಟು 35 ಸೌರ ಪಿವಿ ಫಲಕಗಳಿದ್ದು ತಲಾ 330 ಡಬ್ಲ್ಯೂಪಿ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.
ಪ್ರತಿ ಸೌರ ವೃಕ್ಷಕ್ಕೆ 7.5 ಲಕ್ಷ ರೂ. ವೆಚ್ಚವಾಗಲಿದೆ ಮತ್ತು ಐಒಟಿ ಆಧಾರಿತ ವೈಶಿಷ್ಟ್ಯಗಳನ್ನು ಸಂಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ, ಅಂದರೆ ಕೃಷಿ ಕ್ಷೇತ್ರಗಳಲ್ಲಿ 24 ಗಂಟೆ ಸಿಸಿಟಿವಿ ಕಣ್ಗಾವಲು, ನೈಜ-ಸಮಯದ ಆರ್ದ್ರತೆ, ಗಾಳಿಯ ವೇಗ, ಮಳೆ ಮುನ್ಸೂಚನೆ ಮತ್ತು ಮಣ್ಣಿನ ವಿಶ್ಲೇಷಣಾ ಸಂವೇದಕಗಳು ಹೀಗೆ ಎಲ್ಲದಕ್ಕೂ ಇದನ್ನು ಬಳಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.