ನವದೆಹಲಿ: ಹಣಕಾಸು ವಂಚನೆ ಪ್ರಕರಣದ ಆರೋಪಿಗಳಿಂದ ಕಾಂಗ್ರೆಸ್ ಪಕ್ಷವು ರಾಜೀವ್ ಗಾಂಧಿ ಫೌಂಡೇಶನ್ ಮತ್ತು ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ಗೆ ದೇಣಿಗೆಗಳನ್ನು ಪಡೆದುಕೊಂಡಿದೆ ಎಂದು ಬಿಜೆಪಿ ಮತ್ತೊಂದು ಸುತ್ತಿನ ಆರೋಪ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು, “ಹಣಕಾಸು ವಂಚನೆ ಮಾಡಿರುವ ಸಂಸ್ಥೆ ಮತ್ತು ವ್ಯಕ್ತಿಗಳಾದ ಮೆಹೂಲ್ ಚೋಕ್ಸಿ, ರಾಣಾ ಕಪೂರ್, ಜಿಗ್ನೇಶ್ ಶಾ, ಝಾಕೀರ್ ನಾಯ್ಕ್ ಮತ್ತು ಜಿವಿಕ ಗ್ರೂಪ್ ಮುಂತಾದುವುಗಳಿಂದ ರಾಜೀವ್ ಗಾಂಧಿ ಫೌಂಡೇಶನ್ ಮತ್ತು ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಹಣವನ್ನು ಪಡೆದುಕೊಂಡಿದೆ” ಎಂದು ಆರೋಪಿಸಿದ್ದಾರೆ.
ಆರ್ಜಿಎಫ್ ಮತ್ತು ಆರ್ಜಿ ಚಾರಿಟೇಬಲ್ ಟ್ರಸ್ಟ್ಗೆ ನೀಡಿದ ದೇಣಿಗೆಗಳು ಸಹಜವಾದುದಲ್ಲ, ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಆರೋಪಿಸಿದ ಅವರು, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆಯಲ್ಲಿ ಭಾಗಿಯಾಗಿರುವ ಅಪರಾಧಿ ಮೆಹುಲ್ ಚೋಕ್ಸಿಯು M/s ನವಿರಾಜ್ ಎಸ್ಟೇಟ್ ಪ್ರೈ.ಲಿ ಗೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇದು ಗೀತಾಂಜಲಿ ಗ್ರೂಪ್ನ ಪೇಪರ್ ಕಂಪನಿ, ಪರೋಕ್ಷ ಮೆಹುಲ್ ಚೋಕ್ಸಿ ಒಡೆತನದಲ್ಲಿದೆ ಎಂದಿದ್ದಾರೆ.
ಮನಿ ಲಾಂಡರಿಂಗ್ ಚಟುವಟಿಕೆಗಳಿಂದ ಆದಾಯವನ್ನು ಚೋಕ್ಸಿ ರವಾನಿಸಿದ ಕಂಪನಿಗಳಲ್ಲಿ M/s ನವಿರಾಜ್ ಎಸ್ಟೇಟ್ಸ್ ಪ್ರೈ ಲಿಮಿಟೆಡ್ ಕೂಡ ಒಂದು. ಕಂಪನಿಯ 99.99% ಷೇರುಗಳನ್ನು ಅವರ ಮಗ ರೋಹನ್ ಚೋಕ್ಸಿಗೆ ಹಂಚುವ ಮೂಲಕ ಮೆಹುಲ್ ಚೋಕ್ಸಿ ಇದನ್ನು ಪರೋಕ್ಷವಾಗಿ ಹೊಂದಿದ್ದರು, ನಿಯಂತ್ರಿಸಿದ್ದರು ಮತ್ತು ನಿರ್ವಹಿಸುತ್ತಿದ್ದರು. ಮೆಹುಲ್ ಚೋಕ್ಸಿ ಕಂಪನಿಯ ನಿರ್ದೇಶಕರಲ್ಲಿ ಒಬ್ಬರು ಎಂದಿದ್ದಾರೆ.
rರೂ. 47.78 ಕೋಟಿ ಮತ್ತು ರೂ. 24.45 ಲಕ್ಷ ರೂ.ಗಳನ್ನು ಈ ಕಾಗದದ ಕಂಪನಿಗೆ ವರ್ಗಾಯಿಸಲಾಗಿದೆ. 2013-14 ಮತ್ತು 2011-12ರ ಆರ್ಥಿಕ ಅವಧಿಯಲ್ಲಿ ಗೀತಾಂಜಲಿ ಇನ್ಫ್ರಾಟೆಕ್ ಪ್ರೈ. ಲಿಮಿಟೆಡ್ ಮತ್ತು ಮೆಹುಲ್ ಚೋಕ್ಸಿ ನಡುವೆ ಯಾವುದೇ ವ್ಯವಹಾರ ಚಟುವಟಿಕೆಗಳು ಇರಲಿಲ್ಲ. ಆದರೂ ಹಣ ವರ್ಗಾವಣೆಯಾಗಿದೆ. ಈ ಹಣದ ಪೈಕಿ 10 ಲಕ್ಷ ರೂ.ಗಳನ್ನು ರಾಜೀವ್ ಗಾಂಧಿ ಫೌಂಡೇಶನ್ಗೆ ನವೀರಾಜ್ ಎಸ್ಟೇಟ್ ಪ್ರೈ. ಲಿಮಿಟೆಡ್ ಖಾತೆ ಮೂಲಕ ಹಣವನ್ನು ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
The donations to the Rajiv Gandhi Foundation was no co-incidence, but a conspiracy.
The first revelation is on Mehul Choksi, who had donated to the RGF, who was involved in the Punjab National Bank fraud case: Dr @sambitswaraj pic.twitter.com/B3s1r4zohc
— BJP (@BJP4India) August 31, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.