ಬೆಂಗಳೂರು: ನೆಲಮಂಗಲದಿಂದ, ಸೋಲಾಪುರದ ಬಾಲೆ ರೈಲ್ವೆ ನಿಲ್ದಾಣಗಳ ನಡುವೆ ಸಂಚಾರ ನಡೆಸಲಿರುವ ರೋಲ್ ಆನ್ ರೋಲ್ ಆಫ್ (ರೋರೋ) ರೈಲು ಸೇವೆಯ ಮೊದಲ ಪ್ರಯಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಲ್ಟಿ ಮಾಡೆಲ್ ಟ್ರಾನ್ಸ್ಪೋರ್ಟ್ ಸಿಸ್ಟಮ್ನ ಆಶಯದಂತೆ ಈ ರೋರೋ ಸೇವೆ ಆರಂಭ ಮಾಡಲಾಗಿದೆ ಎಂದು ಹೇಳಿದರು. ಸರಕು ಸಹಿತ, ರಹಿತ 42 ಟ್ರಕ್ಗಳನ್ನು ಸಾಗಿಸುವ ಸಾಮರ್ಥ್ಯ ಈ ರೈಲಿಗಿದೆ. ಈ ರೈಲುಗಳನ್ನು ಬಳಕೆ ಮಾಡಿ ಸರಕುಗಳನ್ನು ಈ ಎರಡು ಪ್ರದೇಶಗಳ ನಡುವಿನ ಸ್ಥಳಗಳಿಗೆ ಸುಲಭ ಮತ್ತು ತ್ವರಿತವಾಗಿ ತಲುಪಿಸುವುದು ಸಾಧ್ಯವಾಗಲಿದೆ ಎಂದು ಹೇಳಿದರು.
ಒಂದು ರೋರೋ ರೈಲಿನಲ್ಲಿ ಟ್ರಕ್, ಸರಕುಗಳೆರಡೂ ಸೇರಿದಂತೆ 1260 ಟನ್ಗಳಷ್ಟು ಭಾರವನ್ನು ಸಾಗಿಸಬಹುದಾಗಿದೆ. ಇದು ಪರಿಸರಕ್ಕೆ ಪೂರಕವಾಗಿರುವ ವ್ಯವಸ್ಥೆಯಾಗಿದ್ದು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿಯೂ ಸಹಾಯ ಮಾಡಲಿದೆ ಎಂದು ಸಿಎಂ ನುಡಿದರು. ಟ್ರಕ್ಗಳ ಧೀರ್ಘ ಬಾಳಿಕೆಯ ದೃಷ್ಟಿಯಿಂದಲೂ ರೋರೋ ಮೂಲಕ ಸಾಗಾಟ ಉತ್ತಮ. ಜೊತೆಗೆ ರಸ್ತೆ ಮಾರ್ಗದಲ್ಲಿನ ಸಂಚ ರ ದಟ್ಟಣೆ ಕಡಿಮೆ ಮಾಡಲು ಈ ವ್ಯವಸ್ಥೆ ಪರಿಣಾಮಕಾರಿಯಾಗಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ, ಸಚಿವ ಆರ್. ಅಶೋಕ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.