ನವದೆಹಲಿ: 2007 ರ ಗ್ಲ್ಯಾಸ್ಗೋ ವಿಮಾನ ನಿಲ್ದಾಣ ಸ್ಫೋಟದ ಮಾಸ್ಟರ್ ಮೈಂಡ್ಗೆ ನಿಕಟವರ್ತಿಯಾಗಿದ್ದ ಲಷ್ಕರ್-ಇ-ತೋಯ್ಬಾದ ಉಗ್ರನೋರ್ವನನ್ನು ಬಂಧಿಸಿದ್ದು, ಸೌದಿ ಅರೇಬಿಯಾದಿಂದ ಭಾರತಕ್ಕೆ ಕರೆತಂದಿರುವುದಾಗಿ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತ ಉಗ್ರನನ್ನು ಶಬೀಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಆತನನ್ನು ಶುಕ್ರವಾರವಷ್ಟೇ ಭಾರತಕ್ಕೆ ಕರೆತರಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈತ ಯುಕೆಯ ಗ್ಲ್ಯಾಸ್ಗೋ ವಿಮಾನ ನಿಲ್ದಾಣ ಸ್ಫೋಟದ ಮಾಸ್ಟರ್ ಮೈಂಡ್ ಕಪಿಲ್ ಅಹಮದ್ ಎಂಬಾತನ ಸೋದರ ಸಂಬಂಧಿ ಎಂಬ ವಿಚಾರವನ್ನೂ ಅಧಿಕಾರಿಗಳು ಬಹಿರಂಗ ಮಾಡಿದ್ದಾರೆ.
2010-11 ರ ಸಂದರ್ಭದಲ್ಲಿ ಭಾರತದಿಂದ ಸೌದಿ ಅರೇಬಿಯಾಕ್ಕೆ ತೆರಳಿದ್ದ ಈತನಿಗೂ 2007 ರ ದಾಳಿಯ ಪ್ರಕರಣದಲ್ಲಿ ಸಂಬಂಧವಿತ್ತು ಎಂದು ತಿಳಿದು ಬಂದಿದೆ. 2015 ರಲ್ಲಿ ಈತನ ಮೇಲೆ ದೆಹಲಿಯ ಪೊಲೀಸರು ಪ್ರಕರಣವನ್ನೂ ದಾಖಲಿಸಿದ್ದರು. 12 ಜುಲೈ 2016 ರಲ್ಲಿ ದೆಹಲಿ ನ್ಯಾಯಾಲಯ ಈತನನ್ನು ವಾಂಟೆಡ್ ಲಿಸ್ಟ್ಗೆ ಸೇರಿಸಿತ್ತು ಎಂದು Anti- terror probe ಏಜೆನ್ಸಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2017ರಲ್ಲಿ ಭಾರತದ ಏಜೆನ್ಸಿಗಳು ʼಅಲ್ ಖೈದಾ ಇನ್ ದ ಇಂಡಿಯನ್ ಸಬ್ಕಾಂಟಿನೆಂಟ್ʼ ಸದಸ್ಯ ಶಂಕಿತ ಸಯ್ಯದ್ ಮೊಹಮ್ಮದ್ ಜಿಶಾನ್ ಎಂಬಾತನನ್ನು ಸೌದಿ ಅರೇಬಿಯಾದಲ್ಲಿ ವಶಕ್ಕೆ ತೆಗೆದುಕೊಂಡು ಭಾರತಕ್ಕೆ ಕರೆತಂದಿತ್ತು. ಈತ ಸದ್ಯ ಸೆರೆ ಸಿಕ್ಕ ಉಗ್ರನ ಸಹೋದರಿಯನ್ನು ಮದುವೆಯಾಗಿದ್ದ ಎಂದು ಮೂಲಗಳು ತಿಳಿಸಿವೆ.
2015ರಲ್ಲಿ ಕಟಕ್ ಮೂಲದ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧನಕ್ಕೊಳಪಡಿಸುವ ಮೂಲಕ AQIS ಜಾಲವನ್ನು ವಿಶೇಷ ತನಿಖಾ ತಂಡಗಳು ಯಶಸ್ವಿಯಾಗಿ ಬೇಧಿಸಿದ್ದವು. ಈ ಸಂದರ್ಭದಲ್ಲಿ ಈಗ ಸೆರೆ ಸಿಕ್ಕ ಉಗ್ರ ಶಬೀಲ್ ಅಹ್ಮದ್ನ ಬಗೆಗೂ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2009 ರಲ್ಲಿ ಶಬೀಲ್ ಅಹ್ಮದ್ನನ್ನು ಭೇಟಿ ಮಾಡಿರುವುದಾಗಿ ರೆಹಮಾನ್ ಸಹ ತನಿಖೆಯ ವೇಳೆ ತಿಳಿಸಿದ್ದ ಎಂಬುದನ್ನು ಇದೀಗ ಅಧಿಕಾರಿಗಳು ಬಹಿರಂಗ ಮಾಡಿದ್ದಾರೆ.
ಬಂಧಿತ ಉಗ್ರನನ್ನು ಶೀಘ್ರದಲ್ಲೇ ದೆಹಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಮತ್ತು ತನಿಖೆಯ ವೇಳೆ ಈತನನ್ನು ಬೆಂಗಳೂರು ಸೇರಿದಂತೆ ದೇಶದ ಇನ್ನಿತರ ಪ್ರದೇಶಗಳಿಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.