ನವದೆಹಲಿ: ಭಾರತೀಯ ವಾಯುಸೇನೆಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಫ್ರಾನ್ಸ್ನಿಂದ ಇತ್ತೀಚೆಗಷ್ಟೇ ಭಾರತಕ್ಕೆ ತರಿಸಿಕೊಂಡಿದ್ದ 5 ರಫೆಲ್ ಯುದ್ಧ ವಿಮಾನಗಳನ್ನು ಸೆ. 10 ರಂದು ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆ ಮಾಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹರಿಯಾಣ ರಾಜ್ಯದ ಅಂಬಾಲ ವಾಯುನೆಲೆಯಲ್ಲಿ ಸಮಾರಂಭವೊಂದನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಫ್ರಾನ್ಸ್ನ ರಕ್ಷಣಾ ಸಚಿವ ಫ್ಲೊರೆನ್ಸ್ ಪರ್ಲಿ ಅವರಿಗೂ ಆಹ್ವಾನ ನೀಡಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ. ಭಾರತದ ರಕ್ಷಣಾ ಸಚಿವರು ಸೆ. 4-6 ರ ವರೆಗೆ ರಷ್ಯಾದ ಶಾಂಘೈನಲ್ಲಿ ನಡೆಯಲಿರುವ ರಕ್ಷಣಾ ಸಚಿವರುಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಭಾರತಕ್ಕೆ ಮರಳಿದ ಬಳಿಕ ಈ ಸಮಾರಂಭ ನಡೆಯಲಿದೆ ಎಂದೂ ಅಧಿಕಾರಿಗಳು ಈ ಸಂಬಂಧ ಮಾಹಿತಿ ನೀಡಿದ್ದಾರೆ.
ಈ 5 ರಫೆಲ್ ವಿಮಾನಗಳನ್ನು ಖರೀದಿಸುವ ಸಂಬಂಧ 2016 ರಲ್ಲಿ ಭಾರತ ಫ್ರಾನ್ಸ್ ಜೊತೆಗೆ 60 ಸಾವಿರ ಕೋಟಿ ರೂ. ಗಳ ಒಪ್ಪಂದ ಮಾಡಿಕೊಂಡಿತ್ತು. ಈ ವರ್ಷದ ಜುಲೈ 29ರಂದು ಈ ವಿಮಾನಗಳನ್ನು ಭಾರತಕ್ಕೆ ತರಲಾಗಿತ್ತು. ಜೊತೆಗೆ ಪೈಲಟ್ಗಳಿಗೆ ಈ ವಿಮಾನದ ತರಬೇತಿಯನ್ನೂ ನೀಡಲು ಆರಂಭಿಸಲಾಗಿತ್ತು. ಮುಂದಿನ 10-12 ವರ್ಷಗಳಲ್ಲಿ 300ಕ್ಕೂ ಅಧಿಕ ಯುದ್ಧ ವಿಮಾನಗಳನ್ನು ಹೊಂದುವ ನಿರೀಕ್ಷೆ, ಅಗತ್ಯತೆಯನ್ನು ಭಾರತ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.