ನವದೆಹಲಿ: ಭಾರತದ ಅಜನ್ಮ ಶತ್ರು ಪಾಕಿಸ್ಥಾನ ಮತ್ತು ಲಡಾಕ್ ಗಡಿಯಲ್ಲಿ ಭಾರತದ ಕಾಲೆಳೆಯುತ್ತಿರುವ ಕುತಂತ್ರಿ ಚೀನಾದ ಸದ್ದಡಗಿಸಲು ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಇಸ್ರೇಲ್ ನಿರ್ಮಿತ ಫಾಲ್ಕನ್ ವಾಯುಗಾಮಿ ರಕ್ಷಣಾ ವ್ಯವಸ್ಥೆಯನ್ನು ಖರೀದಿ ಮಾಡಲು ಮುಂದಾಗಿದೆ.
ದೇಶದ ಗಡಿಗಳಲ್ಲಿ ಕುತಂತ್ರಿ ರಾಷ್ಟ್ರಗಳ ಆಟ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳಲಾರಂಭಿಸಿದೆ. ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಫ್ರಾನ್ಸ್, ರಷ್ಯಾ, ಅಮೆರಿಕ, ಇಸ್ರೇಲ್ ಮೊದಲಾದ ರಾಷ್ಟ್ರಗಳ ಜೊತೆಗೆ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ. ಪ್ರಸ್ತುತ ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್ಗಳನ್ನು ಬಳಸಿ ಇಸ್ರೇಲ್ನಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಫಾಲ್ಕನ್ ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಗಳುಳ್ಳ ವಿಮಾನಗಳನ್ನು ಖರೀದಿಸಲು ಮುಂದಾಗಿದೆ.
ಈ ಖರೀದಿ ಒಪ್ಪಂದಕ್ಕೆ ʼಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯೂರಿಟಿʼ ಸಹಿ ಹಾಕಿ ಅನುಮೋದನೆ ನೀಡಿದ ಎರಡು ಮೂರು ವರ್ಷಗಳಲ್ಲೇ ಈ ವಿಮಾನಗಳು ಭಾರತೀಯ ವಾಯುನೆಲೆಯನ್ನು ಅಲಂಕರಿಸಲಿವೆ. ಈಗಾಗಲೇ ಭಾರತದಲ್ಲಿ ಮೂರು 360 ಡಿಗ್ರಿ ರೊಡೋಮ್ ಮೊಂಟೆಡ್ ಏರ್ ಕ್ರಾಫ್ಟ್ ಫಾಲ್ಕನ್ ಎಡಬ್ಲ್ಯೂಎಸಿಎಸ್ ಮತ್ತು ಡಿಆರ್ ಡಿಒ ನಿರ್ಮಿಸಿರುವ ಎರಡು 240 ಡಿಗ್ರಿ ರೊಡೋಮ್ ಮೊಂಟೆಡ್ ಏರ್ ಕ್ರಾಫ್ಟ್ ಫಾಲ್ಕನ್ ಎಡಬ್ಲ್ಯೂಎಸಿಎಸ್ ಗಳು ಸೇರಿ ಒಟ್ಟು ಐದು ವಿಮಾನಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.