ಮಂಗಳೂರು : ಸ್ವಚ್ಛ ಭಾರತ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಭಿಷೇಕ್ ಕುಮಾರ್ ಶರ್ಮ ಉತ್ತರ ಪ್ರದೇಶದಿಂದ ಆರಂಭಿಸಿದ ಸೈಕಲ್ ಜಾಥಾ ಬುಧವಾರ ಮಂಗಳೂರಿಗೆ ಆಗಮಿಸಿತು. ಮಂಗಳೂರಿನಲ್ಲಿ ಸೈಕಲ್ ಜಾಥಾ ಸ್ವಾಗತಿಸಿದ ನಂತರ ಶಾರದಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜತೆ ಸ್ವಚ್ಛ ಭಾರತ ಅರಿವಿಗಾಗಿ ಸಂವಾದ ಕಾರ್ಯಕ್ರಮ ನಡೆಯಿತು.
28ರ ಹರೆಯದ ಅಭಿಷೇಕ್ ಕುಮಾರ್ ಶರ್ಮ ಎಂ.ಎಸ್ಸಿ, ಪರಿಸರ ವಿಜ್ಞಾನದಲ್ಲಿ ಎಂ.ಫಿಲ್, ಪಿಜಿಸಿಡಬ್ಲ್ಯುಎಂ ಮಾಡಿದ್ದಾರೆ. ತ್ಯಾಜ್ಯ ನಿರ್ವಹಣೆ ಬಗೆಗಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಧಾನಿ ಮೋದಿ ಸ್ವಚ್ಛ ಭಾರತ ಘೋಷಣೆ ಮಾಡಿದ ಬಳಿಕ ಜನರಲ್ಲಿ ಜಾಗೃತಿ ಮೂಡಿಸಿ ಕನಸು ನನಸು ಮಾಡಬೇಕು ಎಂಬುದು ಜಾಥದ ಮೂಲ ಉದ್ದೇಶ.
ಸೈಕಲ್ ಜಾಥಾ ಆರಂಭವಾಗಿ ವರ್ಷ ಹತ್ತಿರವಾಗಿದೆ. ಉತ್ತರ ಭಾರತ ತಿರುಗಾಟ ನಂತರ ಕರ್ನಾಟಕಕ್ಕೆ ಬಂದಿದ್ದೇನೆ. ಇದುವರೆಗೆ ಮೂರು ಸೈಕಲ್ ಬದಲಾಯಿಸಿದ್ದು, ಮೋದಿ ಗಿಫ್ಟ್ ಕೊಟ್ಟ ಸೈಕಲಿನಲ್ಲಿ ಕರ್ನಾಟಕ ಪ್ರವಾಸ ಮಾಡುತ್ತಿದ್ದೇನೆ. ಸ್ವಚ್ಛ ಭಾರತ ಜಾಗೃತಿ ಮೂಡಿಸುವುದೇ ಜಾಥಾ ಉದ್ದೇಶ. ಒಟ್ಟು 14 ರಾಜ್ಯ ತೆರಳುವ ಮೂಲಕ 204 ಜಿಲ್ಲೆ ಭೇಟಿ ನೀಡಿದ್ದೇನೆ. 2000ಕ್ಕೂ ಅಧಿಕ ಕಡೆ ಜಾಗೃತಿ ಬಗ್ಗೆ ಅರಿವು ಮೂಡಿಸುವ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಸ್ವಚ್ಛ ಭಾರತದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿದಾಗ ಮಾತ್ರ ಮೋದಿ ಕನಸು ನನಸಾಗಲು ಸಾಧ್ಯ. ಆದ್ದರಿಂದ ಭಾರತ ಸ್ವಸ್ಥ ಮತ್ತು ಸ್ವಚ್ಛ ಭಾರತ ಆಗಬೇಕೆಂಬುವುದಾಗಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳನ್ನೊಳಗೊಂಡು ವಿದ್ಯಾಲಯದ ವಿದ್ಯಾರ್ಥಿಗಳು ಹರ್ಷದಿಂದ ಭಾಗವಹಿಸಿದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ ಮಡಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಕಾರ್ಯಕ್ರಮ ನಿರ್ವಹಣೆಗೈದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.