ನವದೆಹಲಿ: ರಾಜ್ಯದ ಧಾರವಾಡ ಮೂಲದ ಡಾ. ಮಾಧುರಿ ಕಾನಿಟ್ಕರ್ ಅವರು ಭಾರತೀಯ ಸೇನೆಯ ತ್ರಿ ಸ್ಟಾರ್ ರ್ಯಾಂಕ್ ಪಡೆಯುವ ಮೂಲಕ, ತ್ರಿ ಸ್ಟಾರ್ ಗೌರವ ಪಡೆದ ಮೂರನೇ ಮಹಿಳಾ ಅಧಿಕಾರಿ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ಆ ಮೂಲಕ ಲೆ. ಜನರಲ್ ಹುದ್ದೆಗೆ ಭಡ್ತಿ ಹೊಂದಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಮಾಧುರಿ ಅವರ ಅಜ್ಜಿ ಸರಳಾದೇವಿ ಅವರೂ ವೈದ್ಯರಾಗಿದ್ದವರು. ಅವರಿಂದ ಪ್ರೇರೇಪಿತರಾದ ಮಾಧುರಿ ತಾವೂ ಸಹ ವೈದ್ಯೆಯಾಗುವ ಕನಸನ್ನು ಹೊಂದಿ ಯಶಸ್ವಿಯಾದರು. ಪುಣೆ ವಿವಿಯಲ್ಲಿ ಎಂಬಿಬಿಎಸ್ ಪದವಿ ಓದಿರುವ ಇವರು ಉತ್ಕೃಷ್ಟ ದರ್ಜೆಯ ಜೊತೆಗೆ ಪ್ರಥಮ ರ್ಯಾಂಕ್ ಗಳಿಸಿದ್ದರು. ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ಮೆರೆದಿದ್ದ ಮಾಧುರಿ ಅವರಿಗೆ 1982 ರಲ್ಲಿ ರಾಷ್ಟ್ರಪತಿಗಳಿಂದ ಬಂಗಾರದ ಪದಕವೂ ಲಭಿಸಿತ್ತು.
ಇವರ ಪತಿ ರಾಜೀವ್ ಕಾನಿಟ್ಕರ್ ಅವರೂ ಸೇನೆಯಲ್ಲಿ ಲೆ. ಜನರಲ್ ಹುದ್ದೆ ಪಡೆದು ನಿವೃತ್ತಿ ಹೊಂದಿದ್ದಾರೆ.
ಮಾಧುರಿ ಅವರಿಗೂ ಮೊದಲು ಲೆ.ಜ. ಪುನೀತಾ ಅರೋರಾ ಮತ್ತು ಏರ್ ಮಾರ್ಷಲ್ ಪದ್ಮಾ ಬಂಡೋಪಾಧ್ಯಾಯ ಅವರು ಸೇನೆಯ ತ್ರಿ ಸ್ಟಾರ್ ರ್ಯಾಂಕ್ ಗೌರವ ತಮ್ಮದಾಗಿಸಿಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.