ಮುಂಬಯಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಪ್ರಭಾವ ಶೈಕ್ಷಣಿಕ ಸಂಸ್ಥೆಗಳ ಮೇಲೂ ಬೀರಿದೆ. ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳನ್ನು ವರ್ಚುವಲ್ ಆಗಿ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರಮುಖ ಸಂಸ್ಥೆಯಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ತನ್ನ 58 ನೇ ಘಟಿಕೋತ್ಸವವನ್ನು “ವರ್ಚುವಲ್ ರಿಯಾಲಿಟಿ ಮೋಡ್” ನಲ್ಲಿ ಭಾನುವಾರ ನಡೆಸಿ ಎಲ್ಲರ ಮನ ಗೆದ್ದಿತು.
ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಡಂಕನ್ ಹಾಲ್ಡಾನೆ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ಈ ಘಟಿಕೋತ್ಸವಕ್ಕೆ ವಿದ್ಯಾರ್ಥಿಗಳಿಗೆ ಸೇರಲು ಸಾಧ್ಯವಾಗದಿದ್ದರೂ, ಡಿಜಿಟಲ್ ಅವತಾರಗಳಲ್ಲಿ ವರ್ಚುವಲ್ ವೇದಿಕೆಯಲ್ಲಿ ಅವರು ಪದಕಗಳನ್ನು ಸ್ವೀಕಾರ ಮಾಡಿದ್ದಾರೆ. ಅತಿಥಿ ಹಾಗೂ ವಿದ್ಯಾರ್ಥಿಗಳ ಪ್ರತಿಬಿಂಬ ವರ್ಚುವಲ್ ಆಗಿ ಮೂಡಿ ಬಂದಿದ್ದು ಎಲ್ಲರ ಗಮನವನ್ನು ಸೆಳೆದಿದೆ.
ಸಂಸ್ಥೆಯ 62 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪದವೀಧರರಿಗೆ ಪ್ರಶಸ್ತಿಗಳು ಮತ್ತು ಪದವಿಗಳನ್ನು ವರ್ಚುವಲ್ ಅವತಾರಗಳಲ್ಲಿ ಪ್ರದಾನಿಸಲಾಗಿದೆ.
ಎರಡು ಗಂಟೆಗಳ ವರ್ಚುವಲ್ ಘಟಿಕೋತ್ಸವದಲ್ಲಿ ಪ್ರೊಫೆಸರ್ ಡಂಕನ್ ಹಾಲ್ಡಾನೆ ಅವರ ಭಾಷಣವನ್ನು ನೇರ ಪ್ರಸಾರ ಮಾಡಲಾಗಿದ್ದು, ಈ ವೇಳೆ ಅವರು “ಸಂಶೋಧನೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಒಂದು ಪಾಠವಿದೆ. ವಿಶ್ವದ ಶ್ರೇಷ್ಠ ನಾವೀನ್ಯತೆ ಕೇಂದ್ರಗಳಲ್ಲಿ ಒಂದಾಗಿ ಭಾರತವು ತನ್ನ ಹಕ್ಕನ್ನು ಸಾಧಿಸಲು ಸಿದ್ಧವಾಗಿದೆ” ಎಂದಿದ್ದಾರೆ.
Today is a special day for many @iitbombay students & their families, also for the entire #IITBombay community
A one-of-its-kind #VirtualReality digital convocation is being held today, in the unprecedented situation due to #COVID19
LIVE from 1.30 PM: https://t.co/eu6wp5O1Ur pic.twitter.com/EJO6vCpJMW
— PIB in Maharashtra 🇮🇳 (@PIBMumbai) August 23, 2020
Glimpses from @iitbombay's #VirtualReality Convocation pic.twitter.com/AY8llqeQQz
— PIB in Maharashtra 🇮🇳 (@PIBMumbai) August 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.