ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶುಕ್ರವಾರ ಜಮ್ಮು ರಿಂಗ್ ರೋಡ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದರು ವರದಿಗಳು ತಿಳಿಸಿವೆ.
ರಸ್ತೆ ಸಂಪರ್ಕವನ್ನು ಹೆಚ್ಚಿಸಲು ಮತ್ತು ಜಮ್ಮುವಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿರುವ 58.25 ಕಿ.ಮೀ ಉದ್ದದ ಜಮ್ಮು ರಿಂಗ್ ರೋಡ್ ಯೋಜನೆಗೆ 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದ್ದರು.
“ಜಮ್ಮು ರಿಂಗ್ ರೋಡ್ ಯೋಜನೆಯ ಮೊದಲ ಹಂತವನ್ನು ಇಂದು ಉದ್ಘಾಟಿಸಿದ್ದು ನನಗೆ ಬಹಳ ಹೆಮ್ಮೆಯ ಕ್ಷಣವಾಗಿದೆ, ಇದರ ಅಡಿಪಾಯವನ್ನು 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿದ್ದರು” ಎಂದು ಸಿನ್ಹಾ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದಾರೆ.
“ಕಳೆದ ಆರು ವರ್ಷಗಳಲ್ಲಿ ದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ . ಅದೇ ರೀತಿ ಕೆಲಸದ ಸಂಸ್ಕೃತಿಯೂ ಬದಲಾಗಿದೆ ಎಂದು ನಾನು ಭಾವಿಸುತ್ತೇನೆ. ಕೆಲಸದ ಸಂಸ್ಕೃತಿಯಿಂದಾಗಿ, ನಾವು ಆಡಳಿತವನ್ನು ಸಾಧಿಸಲು ಸಾಧ್ಯವಾಯಿತು” ಎಂದು ಅವರು ಹೇಳಿದ್ದಾರೆ.
ಗಡುವುಗಿಂತ ಮುಂಚಿತವಾಗಿ ರಿಂಗ್ ರೋಡ್ ಯೋಜನೆ ಪೂರ್ಣಗೊಂಡರೆ, ಪ್ರೋತ್ಸಾಹ ಧನ ನೀಡುವ ಅವಕಾಶವನ್ನು ರೂಪಿಸಬಹುದು ಎಂದು ಅವರು ಹೇಳಿದರು.
ಪ್ರಸ್ತಾವಿತ ಜಮ್ಮು ರಿಂಗ್ ರೋಡ್ ನಾಲ್ಕು ಲೇನ್ ಸಂರಚನೆಯೊಂದಿಗೆ ಗ್ರೀನ್ಫೀಲ್ಡ್ ಜೋಡಣೆಯಾಗಿದೆ. ರಿಂಗ್ ರೋಡ್ ಜಮ್ಮು ನಗರದ ಸಂಚಾರ ದಟ್ಟಣೆಯನ್ನು ಕುಗ್ಗಿಸುತ್ತದೆ. ರಸ್ತೆಯ ಒಟ್ಟು ಉದ್ದ 58.25 ಕಿ.ಮೀ., ಅದರಲ್ಲಿ 11.75 ಕಿ.ಮೀ ವಿಭಾಗ ಗುಡ್ಡಗಾಡು ಪ್ರದೇಶದಲ್ಲಿದೆ. ಯೋಜನೆಯಲ್ಲಿ ಎರಡು ಸುರಂಗಗಳು, ಎಂಟು ಫ್ಲೈಓವರ್ಗಳು, 16 ಅಂಡರ್ಪಾಸ್ಗಳು, ನಾಲ್ಕು ವಯಾಡಕ್ಟ್ಗಳು, 31 ಸಣ್ಣ ಸೇತುವೆಗಳು, ಎಂಟು ಪ್ರಮುಖ ಸೇತುವೆಗಳು, 255 ಕಲ್ವರ್ಟ್ಗಳು, ಇಂಟರ್ಸೆಕ್ಷನ್, ಸರ್ವಿಸ್ ರೋಡ್, ಪ್ರಾಜೆಕ್ಟ್ ಫೆಸಿಲಿಟಿಗಳು ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.