ಮಂಗಳೂರು: ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ಕೊಂಕಣ ರೈಲ್ವೆ ಆರಂಭ ಮಾಡಿರುವ ರೋರೋ ಸೇವೆಯನ್ನು ಆರಂಭಿಸುವ ಕುರಿತಂತೆ ಚಿಂತನೆಗಳು ನಡೆಯುತ್ತಿದ್ದು ,ಆ ಪ್ರಯುಕ್ತ ರೋರೋ ಪ್ರಾಯೋಗಿಕ ಸಂಚಾರವನ್ನು ಇಂದು ಸುರತ್ಕಲ್ನ ಕುಲಶೇಖರದಿಂದ ಕೋಯಿಕ್ಕೋಡ್ ವರೆಗೆ ನಡೆಸಲಾಯಿತು.
ರೋರೋ ಸೇವೆಯನ್ನು ಕೇರಳದವರೆಗೆ ವಿಸ್ತರಿಸಲು ಬೇಡಿಕೆ ಇದ್ದು, ಆ ಪ್ರಯುಕ್ತ ಇಂದು ಪ್ರಾಯೋಗಿಕ ಪರೀಕ್ಷೆ ಆರಂಭ ಮಾಡಲಾಯಿತು. 1999 ರಲ್ಲಿ ಕೊಂಕಣ ರೈಲ್ವೆ ಕೊಲಾಡ್ ಮತ್ತು ವರ್ಣ ನಡುವೆ ರೋರೋ ಸೇವೆಯನ್ನು ಆರಂಭ ಮಾಡಿತ್ತು. 2004 ರಲ್ಲಿ ಈ ಸೇವೆಯನ್ನು ಸುರತ್ಕಲ್ ವರೆಗೂ ವಿಸ್ತರಿಸಲಾಗಿದ್ದು, ಪ್ರತಿನಿತ್ಯ 50 ಟ್ರಕ್ಗಳನ್ನು ಹೊಂದಿದ ರೈಲು ಇಲ್ಲಿ ಸಂಚಾರವನ್ನು ನಡೆಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಸಂಪೂರ್ಣವಾಗಿದ್ದು, ಯಾವುದೇ ಅಡಚಣೆಗಳು ಉಂಟಾಗಿಲ್ಲ ಎಂದೂ ಅಧಿಕಾರಿಗಳು ಹೇಳಿದ್ದಾರೆ. 10.30 ಕ್ಕೆ ಮಂಗಳೂರು ಜಂಕ್ಷನ್ನಿಂದ ರೋರೋ ಕೋಯಿಕ್ಕೋಡ್ಗೆ ಪ್ರಯಾಣ ಬೆಳೆಸಿತ್ತು. ಈ ಪರೀಕ್ಷಾರ್ಥ ಪ್ರಯೋಗವನ್ನು ತಿರುವನಂತಪುರದವರೆಗೆ ನಡೆಸಲು ನಿರ್ಧರಿಸಲಾಗಿತ್ತಾದರೂ, ಶೋರನೂರ್ ಸಮೀಪದ ಮೇಲ್ಸೇತುವೆ ಅಡ್ಡಿಯಾಗುವ ಸಾಧ್ಯತೆಯಿರುವ ಆಂತಕವೂ ಇದೆ. ಹೀಗಾದಲ್ಲಿ ಕೋಯಿಕ್ಕೋಡ್ವರೆಗಾದರೂ ರೋರೋ ಸಂಚಾರ ಸೇವೆಗೆ ಕ್ರಮ ಕೈಗೊಳ್ಳುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.