ಮೈಸೂರು: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಷ್ಟ್ರಮಟ್ಟದಲ್ಲಿ ನಡೆಸಿರುವ ಸ್ವಚ್ಛ ಸರ್ವೇಕ್ಷಣ್ 2020 ಸಮೀಕ್ಷೆಯಲ್ಲಿ ಮೂರರಿಂದ ಹತ್ತು ಲಕ್ಷ ಜನಸಂಖ್ಯೆಯುಳ್ಳ ನಗರಗಳ ಪೈಕಿ ಕರ್ನಾಟಕದ ಮೈಸೂರು ಅಗ್ರಸ್ಥಾನ ಗಳಿಸಿಕೊಂಡು ರಾಜ್ಯಕ್ಕೆ ಮತ್ತೆ ಹೆಮ್ಮೆ ತಂದುಕೊಟ್ಟಿದೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ವರ್ಚುವಲ್ ಸಮಾರಂಭದಲ್ಲಿ ವಿಜೇತ ನಗರಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.
2018 ರ ಈ ಸಮೀಕ್ಷೆಯಲ್ಲಿಯೂ ಮೈಸೂರು ಅಗ್ರಸ್ಥಾನವನ್ನೇ ಪಡೆದುಕೊಂಡಿದ್ದು ಇದೀಗ ಮತ್ತೊಮ್ಮೆ ಕ್ಲೀನ್ ಸಿಟಿಯಾಗಿ ಮಾದರಿಯಾಗಿದೆ. ಸಮಗ್ರ ವಿಭಾಗದಲ್ಲಿ ಮೊದಲನೇಯ ಸ್ಥಾನವನ್ನು ಇಂಧೋರ್, ಎರಡನೇಯ ಸ್ಥಾನವನ್ನು ಸೂರತ್, ಮೂರನೇ ಸ್ಥಾನವನ್ನು ನವೀ ಮುಂಬೈ ಮುಡಿಗೇರಿಸಿಕೊಂಡಿದೆ. ಈ ವಿಭಾಗದಲ್ಲಿ ಮೈಸೂರಿಗೆ ಐದನೇ ಸ್ಥಾನ ಲಭಿಸಿದೆ. 2015-16 ರಲ್ಲಿ ಮೈಸೂರು ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಕೀರ್ತಿಯನ್ನೂ ಮುಡಿಗೇರಿಸಿಕೊಂಡಿತ್ತು. 2019 ರಲ್ಲಿ ಮೂರನೇ ಸ್ಥಾನದಲ್ಲಿತ್ತು. ಸಮಗ್ರ ವಿಭಾಗದಲ್ಲಿ ಈ ಬಾರಿ 5 ನೇ ಸ್ಥಾನ ಪಡೆದಿದೆ.
ಇದೇ ಸಂದರ್ಭದಲ್ಲಿ ಮೈಸೂರಿನ ಇಬ್ಬರು ಪೌರ ಕಾರ್ಮಿಕರ ಜೊತೆಗೂ ಸಚಿವರು ಸಂವಾದ ನಡೆಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.