ನವದೆಹಲಿ: ಕೃಷಿಯಲ್ಲಿ ಭಾರತ ಆತ್ಮನಿರ್ಭರಗೊಳ್ಳುತ್ತಿದೆ. ದೇಶದಲ್ಲಿ ಸಾವಯವ ಕೃಷಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಸಾವಯವ ರೈತರ ಸಂಖ್ಯೆಯಲ್ಲಿ ಪ್ರಸ್ತುತ ಭಾರತದ ಮೊದಲ ಶ್ರೇಯಾಂಕವನ್ನು ಪಡೆದುಕೊಂಡಿದೆ ಎಂದು ವರದಿಗಳು ಹೇಳಿವೆ.
ಸಾವಯವ ಕೃಷಿಕರ ಸಂಖ್ಯೆಯಲ್ಲಿ ಭಾರತ ಪ್ರಥಮ ಮತ್ತು ಸಾವಯವ ಕೃಷಿಯ ವಿಸ್ತೀರ್ಣದಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಸಿಕ್ಕಿಂ ಸಂಪೂರ್ಣ ಸಾವಯವವಾಗಿ ಹೊರಹೊಮ್ಮಿದ ಮೊದಲ ರಾಜ್ಯವಾಗಿದೆ ಮತ್ತು ತ್ರಿಪುರ ಮತ್ತು ಉತ್ತರಾಖಂಡ ಸೇರಿದಂತೆ ಇತರ ರಾಜ್ಯಗಳು ಇದೇ ರೀತಿಯ ಗುರಿಗಳನ್ನು ಹೊಂದುವತ್ತ ಮುನ್ನಡೆಯುತ್ತಿವೆ.
ಈಶಾನ್ಯ ಭಾರತವು ಸಾಂಪ್ರದಾಯಿಕವಾಗಿ ಸಾವಯವ ಕೃಷಿಯನ್ನು ಅನುಸರಿಸುತ್ತಿದೆ ಮತ್ತು ಈ ಪ್ರದೇಶದಲ್ಲಿ ರಾಸಾಯನಿಕಗಳ ಬಳಕೆಯು ದೇಶದ ಉಳಿದ ಭಾಗಗಳಿಗಿಂತ ತೀರಾ ಕಡಿಮೆ ಎಂದು ವರದಿಯಾಗಿದೆ. ಸಾವಯವ ಕೃಷಿಯನ್ನು ಮುಂದುವರಿಸಲು ಬುಡಕಟ್ಟು ಮತ್ತು ದ್ವೀಪ ಪ್ರದೇಶಗಳನ್ನು ಸಹ ಪೋತ್ಸಾಹಿಸಲಾಗುತ್ತಿದೆ.
ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸಲು ಸರ್ಕಾರವು ಈಶಾನ್ಯ ಪ್ರದೇಶದಲ್ಲಿ ಮಿಷನ್ ಸಾವಯವ ಮೌಲ್ಯ ಸರಪಳಿ ಅಭಿವೃದ್ಧಿ (ಎಂಒವಿಸಿಡಿ)ಯನ್ನು ಮತ್ತು ಪರಂಪರಗತ್ ಕೃಷಿ ವಿಕಾಸ್ ಯೋಜನಾ (ಪಿಕೆವಿವೈ) ಅನ್ನು 2015 ರಲ್ಲಿ ಪ್ರಾರಂಭಿಸಿತು. ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ಮತ್ತು ಮೂಲ ಬೆಲೆಗಳಿಂದಾಗಿ ಸಂಭಾವನೆಯನ್ನು ಸುಧಾರಿಸಲು ರೈತರಿಗೆ ಸಹಾಯ ಮಾಡುವ ಗುರಿಯನ್ನು ಇದು ಹೊಂದಿದೆ.
ಕೃಷಿ ರಫ್ತು ನೀತಿ 2018, ದೇಶದಲ್ಲಿ ಸಾವಯವ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಒತ್ತು ನೀಡಿದೆ. ಅಗಸೆ ಬೀಜಗಳು, ಎಳ್ಳು, ಸೋಯಾಬೀನ್, ಚಹಾ, ಔಷಧೀಯ ಸಸ್ಯಗಳು, ಅಕ್ಕಿ ಮತ್ತು ಬೇಳೆಕಾಳುಗಳು ಭಾರತದಿಂದ ಆಗುವ ಪ್ರಮುಖ ಸಾವಯವ ರಫ್ತುಗಳಾಗಿವೆ. ಪಾಲ್ಗೊಳ್ಳುವಿಕೆಯ ಖಾತರಿ ವ್ಯವಸ್ಥೆ (ಪಿಜಿಎಸ್) ಮತ್ತು ಸಾವಯವ ಉತ್ಪಾದನೆಗಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್ಪಿಒಪಿ) ಅಡಿಯಲ್ಲಿ ಸಾವಯವ ಉತ್ಪನ್ನಗಳ ತ್ವರಿತ ಮತ್ತು ಸುಲಭ ಪ್ರಮಾಣೀಕರಣ ಪ್ರಕ್ರಿಯೆಯು ಮುಂದಿನ ವರ್ಷಗಳಲ್ಲಿ ಸಾವಯವ ಉತ್ಪನ್ನಗಳ ವಿಷಯದಲ್ಲಿ ಭಾರತವನ್ನು ಮುಂಚೂಣಿಯಲ್ಲಿಡಲು ಸಹಾಯ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.