ಬೆಂಗಳೂರು: ಕೋವಿಡ್-19 ಸಂಕಷ್ಟದ ಈ ಅವಧಿಯಲ್ಲಿ ಸರ್ಕಾರದ ಹಲವು ಉಪಕ್ರಮಗಳ ಅಡಿಯಲ್ಲಿ ಜನರಿಗೆ ಪ್ರಯಾಣ ಅನುಕೂಲ ಒದಗಿಸಿಕೊಡಲು ಮುಂದಾಗಿದ್ದು, 13 ಅಂತರರಾಷ್ಟ್ರೀಯ ವಿಮಾನ ಕಂಪೆನಿಗಳು ವಿದೇಶದ 14 ಸ್ಥಳಗಳಿಗೆ ವಿಮಾನಯಾನ ಸೇವೆ ಕಾರ್ಯಾಚರಣೆಯನ್ನು ಆರಂಭ ಮಾಡಲಿವೆ.
ಈ ಸಂಬಂಧ ಮಾಹಿತಿ ನೀಡಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು, ವಂದೇ ಭಾರತ್ ಮಿಷನ್, ಅಂತರರಾಷ್ಟ್ರೀಯ ಸ್ಥಳಾಂತರ ವಿಮಾನಗಳು, ಏರ್ ಬಬಲ್ ಒಪ್ಪಂದಗಳು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಮರು ಸಂಪರ್ಕ ಒದಗಿಸಲು ಅನುಮೋದಿಸಿರುವುದಾಗಿ ಮಾಹಿತಿ ನೀಡಿದೆ.
ಅಬುದಾಬಿ, ಆಮ್ಸ್ಟರ್ ಡ್ಯಾಮ್, ಫ್ರಾಂಕ್ಫರ್ಟ್, ದೋಹಾ, ದುಬೈ, ಕೌಲಾಲಂಪುರ, ಕುವೈತ್, ಮಸ್ಕತ್, ಲಂಡನ್, ನರಿಟಾ, ರಿಯಾದ್, ಪ್ಯಾರಿಸ್, ಸಿಂಗಾಪುರ್, ಸ್ಯಾನ್ ಫ್ರಾನ್ಸಿಸ್ಕೋ ಗಳಿಗೆ ಈ ಸೇವೆಯನ್ನು ಒದಗಿಸಿಕೊಡುವುದಾಗಿಯೂ ಬಿಐಎಎಲ್ ಮಾಹಿತಿ ನೀಡಿದೆ. 13 ವಿಮಾನಗಳನ್ನು ಬಳಸಿ ಈ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದೂ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಗೋ, ಏರ್ ಇಂಡಿಯಾ, ಗೋ ಏರ್, ವಿಸ್ಟಾರ, ಎತಿಹಾದ್, ಎಮಿರೇಟ್ಸ್ ವಿಮಾನಗಳನ್ನು ಈ ಕಾರ್ಯಾಚರಣೆಗೆ ಬಳಸಲಾಗುತ್ತದೆ ಎಂದೂ ಮಾಹಿತಿ ನೀಡಿದ್ದಾರೆ.
ಈ ವಿಶೇಷ ಕಾರ್ಯಾಚರಣೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವೂ ಸಮ್ಮತಿ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.