ನವದೆಹಲಿ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಭಾರತ ಸರ್ಕಾರ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಅಗತ್ಯ ನೆರವು ಒದಗಿಸಿ ಹೆಚ್ಚಿನ ದೇಶಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಮಾರಿಷಸ್ಗೂ ಭಾರತ ಅಗತ್ಯ ನೆರವು ಒದಗಿಸಿ ಕೊಡುವ ಮೂಲಕ ಸಹಾಯ ಮಾಡಿದ್ದು ಜಗತ್ತಿಗೆ ಮತ್ತೊಮ್ಮೆ ಮಾದರಿಯಾಗಿದೆ.
ಜಪಾನಿನ ನೌಕೆಯಿಂದ ತೈಲ ಸೋರಿಕೆಯುಂಟಾಗಿ ಸಂಕಷ್ಟ ಅನುಭವಿಸುತ್ತಿದ್ದ ಮಾರಿಷಸ್ ಭಾರತದ ಬಳಿ ನೆರವಿಗಾಗಿ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಭಾರತ ದೇಶದ ವಾಯುಪಡೆಯ ವಿಮಾನವೊಂದರಲ್ಲಿ 30 ಟನ್ ಪ್ರಮಾಣದ ತಾಂತ್ರಿಕ ಉಪಕರಣಗಳು ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳನ್ನು ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದೆ.
ನಮೋ ನೇತೃತ್ವದ ಎನ್ಎಂಡಿಎ ಯೋಜನೆಯಡಿಯಲ್ಲಿ ಈ ನೆರವನ್ನು ಒದಗಿಸಲಾಗಿದೆ. ತೈಲ ಸೋರಿಕೆಯ ಕಾರಣದಿಂದಾಗಿ ಪ್ರಾಕೃತಿಕ ಹಾನಿ, ನಿಸರ್ಗದ ಮೇಲಿನ ಅಡ್ಡ ಪರಿಣಾಮ ಮೊದಲಾದ ಭೀತಿಗಳನ್ನು ಎದುರಿಸುತ್ತಿರುವ ಮಾರಿಷಸ್ಗೆ ನೀರಿನಿಂದ ತೈಲವನ್ನು ಬೇರ್ಪಡಿಸಲು, ನೀರನ್ನು ಸ್ವಚ್ಛಗೊಳಿಸಲು ಬೇಕಾದ ಅಗತ್ಯ ವಸ್ತುಗಳ ನೆರವನ್ನು ಭಾರತ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.