ನವದೆಹಲಿ: ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜ್ಜು ಅವರು ಇಂದು ದೇಶಾದ್ಯಂತದ ಅತಿದೊಡ್ಡ ಓಟ ʼಫಿಟ್ ಇಂಡಿಯಾ ಫ್ರೀಡಂ ರನ್ʼಗೆ ಚಾಲನೆಯನ್ನು ನೀಡಿದ್ದಾರೆ. ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆಯಾದ ಇಂದಿನಿಂದ ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿಯವರ 151 ನೇ ಜನ್ಮ ದಿನಾಚರಣೆಯವರೆಗೆ ಇದು ಮುಂದುವರೆಯಲಿದೆ.
ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಸಾಮಾಜಿಕ ಅಂತರದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಈವೆಂಟ್ನಲ್ಲಿ ಭಾಗವಹಿಸುವವರನ್ನು ತಮ್ಮದೇ ಆದ ವೇಗದಲ್ಲಿ, ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ಓಡುವುದಕ್ಕೆ ಪ್ರೋತ್ಸಾಹಿಸಲು ಸರ್ಕಾರ ನಿರ್ಧರಿಸಿದೆ. ಹೆಚ್ಚುವರಿಯಾಗಿ, ಈ ಅವಧಿಯಲ್ಲಿ ಭಾಗಿದಾರರು ಕೆಲ ದಿನಗಳೊಳಗೆ ತಮ್ಮ ಓಟಗಳನ್ನು ನಿಲ್ಲಿಸಬಹುದು. ಒಟ್ಟು ಕಿಲೋಮೀಟರ್ಗಳನ್ನು ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್, ಜಿಪಿಎಸ್ ವಾಚ್ ಅಥವಾ ಮ್ಯಾನುವಲ್ ಬಳಸಿ ಟ್ರ್ಯಾಕ್ ಮಾಡಲಾಗುತ್ತದೆ.
ಕೋವಿಡ್-19 ಪ್ರೋಟೋಕಾಲ್ಗಳನ್ನು ಅನುಸರಿಸುತ್ತಾ ಜನಸಾಮಾನ್ಯರಲ್ಲಿ ಫಿಟ್ನೆಸ್ ಅನ್ನು ಉತ್ತೇಜಿಸುವ ಉದ್ದೇಶದಿಂದ ಈವೆಂಟ್ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ರೂಪಿಸಿದ ಫಿಟ್ ಇಂಡಿಯಾ ಚಳವಳಿಯನ್ನು ಬಲಪಡಿಸುವ ಮತ್ತೊಂದು ಪ್ರಯತ್ನ ಇದಾಗಿದೆ ಮತ್ತು ಫಿಟ್ನೆಸ್ ಅನ್ನು ಜೀವನ ವಿಧಾನವಾಗಿ ಸ್ವೀಕರಿಸಲು ನಾಗರಿಕರನ್ನು ಉತ್ತೇಜಿಸುತ್ತದೆ. ವ್ಯಕ್ತಿಗಳು ಮತ್ತು ಸಂಸ್ಥೆಗಳು ಫಿಟ್ ಇಂಡಿಯಾ ವೆಬ್ಸೈಟ್ನಲ್ಲಿ ಈವೆಂಟ್ಗಾಗಿ ನೋಂದಾಯಿಸಿಕೊಳ್ಳಬಹುದು.
ಫಿಟ್ನೆಸ್ಗೆ ಉತ್ತೇಜನ ನೀಡುವುದು ಮತ್ತು ಬೊಜ್ಜು, ಸೋಮಾರಿತನ, ಒತ್ತಡ, ಆತಂಕ ಮತ್ತು ಇತರ ಕಾಯಿಲೆಗಳಿಂದ ಸ್ವಾತಂತ್ರ್ಯ ಪಡೆಯಲು ನಾಗರಿಕರಿಗೆ ಸಹಾಯ ಮಾಡುವುದು ‘ಫ್ರೀಡಂ ರನ್’ ನ ಧ್ಯೇಯ. ಇತ್ತೀಚಿನ ದಿನಗಳಲ್ಲಿ, ಫಿಟ್ ಇಂಡಿಯಾ ಹಲವಾರು ದೊಡ್ಡ ಪ್ರಮಾಣದ ಕಾರ್ಯಕ್ರಮಗಳಾದ ಫಿಟ್ ಇಂಡಿಯಾ ಫ್ಲ್ಯಾಗ್ ರನ್ ಮತ್ತು ಫಿಟ್ ಇಂಡಿಯಾ ಸೈಕ್ಲೋಥಾನ್ ಅನ್ನು ಜನಸಾಮಾನ್ಯರಿಗಾಗಿ ಆಯೋಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.