ಕೋಲಾರ: ಚಿನ್ನದ ನಾಡು ಕೋಲಾರದಲ್ಲಿಯೂ ಉತ್ಪಾದನಾ ಘಟಕ ತೆರೆಯಲು ತೈವಾನ್ನ ವಿಸ್ಟ್ರಾನ್ನ ಪ್ರಸಿದ್ಧ ಐಫೋನ್ ತಯಾರಿಕಾ ಸಂಸ್ಥೆ ಆ್ಯಪಲ್ ನಿರ್ಧರಿಸಿದೆ. ಸುಮಾರು 2,900 ಕೋಟಿ ರೂ. ಗಳ ಬಂಡವಾಳ ಹೂಡಿಕೆಯ ಜೊತೆಗೆ ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಕಾರ್ಯಾರಂಭ ಮಾಡುವ ಸಲುವಾಗಿ ರೂಪುರೇಶೆಗಳನ್ನು ಹಾಕಿಕೊಂಡಿದೆ.
ಈ ಯೋಜನೆಯ ಕಾರ್ಯಾರಂಭಕ್ಕಾಗಿ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 43 ಎಕರೆ ಭೂಮಿ ಖರೀದಿ ಕಾರ್ಯವನ್ನು ಸಂಸ್ಥೆ ನಡೆಸಿದೆ. ಸದ್ಯ ವಿಸ್ಟ್ರಾನ್ ಕಂಪೆನಿಯಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿ ನಡೆಸುತ್ತಿದೆ. ನರಸಾಪುರದಲ್ಲಿ ಆರಂಭವಾಗಲಿರುವ ಈ ಸಂಸ್ಥೆಯಲ್ಲಿ ಸುಮಾರು 10 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯುವ ಸಾಧ್ಯತೆ ಇದ್ದು, ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನೂ ಆರಂಭ ಮಾಡಲಾಗಿದೆ.
ಪ್ರಸ್ತುತ ಸಂಸ್ಥೆ 2,300 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ನೇಮಕಾತಿ ನಡೆಸುತ್ತಿದೆ. ಮೊದಲ ಹಂತದ ನೇಮಕಾತಿಯಲ್ಲಿ 5 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಉಳಿದಂತೆ 5 ಸಾವಿರ ಹುದ್ದೆಗಳಿಗೆ ಮಾರ್ಚ್ ತಿಂಗಳ ವೇಳೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ.
ಒಟ್ಟಿನಲ್ಲಿ ಕೊರೋನಾ ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡ ರಾಜ್ಯದ ಹಲವರಲ್ಲಿ ಕೆಲವರಿಗಾದರೂ ಈ ಸಂಸ್ಥೆ ಉದ್ಯೋಗ ನೀಡುವ ಮೂಲಕ ರಾಜ್ಯದ ನಿರುದ್ಯೋಗ ಸಮಸ್ಯೆಗೆ ಕೊಂಚ ಮಟ್ಟಿನ ಸಮಾಧಾನ ನೀಡಲಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.