ಬೆಂಗಳೂರು: ಬೆಂಗಳೂರು ಗಲಭೆಗೆ ಸಂಬಂಧಪಟ್ಟ ಹಾಗೆ ಎಸ್ಡಿಪಿಐನ ಮುಝಾಮಿಲ್ ಪಾಶಾ, ಕಾಂಗ್ರೆಸ್ ಕಾರ್ಪೊರೇಟರ್ ಇರ್ಷಾದ ಬೇಗಂ ಪತಿ ಖಲೀಂ ಪಾಶಾ ಸೇರಿದಂತೆ ಒಟ್ಟು 206 ಆರೋಪಿಗಳನ್ನು ಬಂಧಿಸಿ ವಿಚಾರಣೆಯನ್ನು ನಡೆಸಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಬಿ. ಎಲ್. ಸಂತೋಷ್ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ವೋಟ್ಬ್ಯಾಂಕ್ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಗಲಭೆಕೋರರ ದ್ವೇಷದ ಬೆಂಕಿಗೆ ಆಹುತಿಯಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಪಕ್ಷ ತಳೆದಿರುವ ನಿಲುವನ್ನು ಸಂತೋಷ್ ಟೀಕಿಸಿದ್ದಾರೆ. ದಲಿತ ಶಾಸಕರ ಮನೆಗೆ ಬೆಂಕಿ ಹಚ್ಚಿದ್ದನ್ನು ಕಾಂಗ್ರೆಸ್ ಪಕ್ಷ ಖಂಡಿಸುವುದಿಲ್ಲ, ಗಲಭೆ ದೊಂಬಿಗಳನ್ನೂ ಕಾಂಗ್ರೆಸ್ ಖಂಡಿಸುವುದಿಲ್ಲ. ಶೃಂಗೇರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಅಪವಿತ್ರಗೊಳಿಸಿರುವುದಕ್ಕೂ ವಿರೋಧ ವ್ಯಕ್ತಪಡಿಸುವುದಿಲ್ಲ. ಕಾಂಗ್ರೆಸ್ ಈಗಲೂ ತನ್ನ ಹಳೆಯ ವರಸೆಯಾಗಿರುವ ವೋಟ್ಬ್ಯಾಂಕ್ ಓಲೈಕೆ ರಾಜಕಾರಣದಲ್ಲೇ ತಲ್ಲೀನವಾಗಿದೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಹಾಗೆಯೇ ಈ ಗಲಭೆಯ ಹಿಂದಿರುವ ಕಾಣದ ಕೈಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಪತಿ ಖಲೀಂ ಪಾಶಾ, ಎಸ್ಡಿಪಿಐ ಸಂಘಟನೆಯ ಹಿರಿಯ ಕಾರ್ಯಕರ್ತರು ಸೇರಿದಂತೆ 206 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿಯೂ ಕಾಂಗ್ರೆಸ್ ಮಾತ್ರ ಈ ಘಟನೆಯ ಆಪಾದನೆಯನ್ನು ತಿರುಚಲು ಪ್ರಯತ್ನ ನಡೆಸುತ್ತಿದೆ. ಅವರು ಇಂತಹ ಘಟನೆಗಳನ್ನು ಖಂಡಿಸುವ ಕೆಲಸ ಮಾಡುವುದಿಲ್ಲ. ಏಕೆಂದರೆ ಅವರ ಕಣ್ಣು ಮುಂದಿನ ಬಿಬಿಎಂಪಿ ಚುನಾವಣೆಯ ಮೇಲೆ ನೆಟ್ಟಿದೆ ಎಂದು ಸಂತೋಷ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kalim Pasha , husband of @INCKarnataka corporator arrested. 4 senior functionaries of SDPI arrested . Still State Cong leaders trying to shift blame.Not condemning riots . Eyes only on upcoming BBMP elections . #CongressAgainstDalits
— B L Santhosh (@blsanthosh) August 14, 2020
Will not condemn riots . Will not condemn attack on its own Dalit MLA house . Will not condemn desecration of Adi Shankaracharya statue in Sringeri . @INCKarnataka Will continue with age old practice of @INCIndia .. APPEASEMENT… VOTE BANK POLITICS … #CongressAgainstDalits
— B L Santhosh (@blsanthosh) August 14, 2020
Ex CM of @INCKarnataka has tagged me in 13 tweets . Not one condemning riots or attack on his own party’s Dalit MLA or asking Govt for tough actions . Same beating around the bush asking irrelevant questions to BJP. Fear of votes & Policy of appeasement. #CongressAgainstDalits
— B L Santhosh (@blsanthosh) August 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.