ಎಪ್ರಿಲ್ 5 ನ್ನು ರಾಷ್ಟ್ರೀಯ ಕಡಲಯಾನ ದಿನವನ್ನಾಗಿ ಆಚರಿಸುವ ಸಂಪ್ರದಾಯ ಭಾರತದಲ್ಲಿ ಪ್ರಾರಂಭವಾದದ್ದು 1964 ರಿಂದ. ಅದಕ್ಕಿಂತ ಮೊದಲು ಅಂದರೆ 1919 ರಲ್ಲಿ ಜಾಗತಿಕ ನೌಕಾಯಾನದ ಇತಿಹಾಸದಲ್ಲಿ ಭಾರತದಿಂದ ಎಸ್ಇಂಡಿಯಾ ಸ್ಟೀಮ್ ನೇವಿಗೇಶನ್ ಕಂಪೆನಿಯ ಮೊದಲ ನೌಕೆ ಎಸ್ಎಸ್ ಲಾಯಲ್ಟಿ ರಷ್ಯಾದತ್ತ ತನ್ನ ಮೊದಲ ಯಾನವನ್ನು ಪ್ರಾರಂಭಿಸಿದ ನೆನಪಿಗಾಗಿ ಈ ದಿನವನ್ನು ಮುಖ್ಯವಾಗಿ ನೌಕಾದಳ ಆಚರಿಸಿಕೊಂಡು ಬರುತ್ತಿದೆ.
ಭಾರತದ ಮೂರು ದಿಕ್ಕಿನಲ್ಲಿಯೂ ಕಡಲು ಆವರಿಸಿಕೊಂಡಿರುವುದರಿಂದ ಮತ್ತು ಭಾರತ ವಿಶ್ವ ಭೂಪಟದಲ್ಲಿ ವಿಶಿಷ್ಟ ಭೌಗೋಳಿಕ ಪರಿಸರವನ್ನು ತನ್ನ ಮೂರು ಕಡೆಗಳಲ್ಲಿಯೂ ಹೊಂದಿರುವುದರಿಂದ ವಿಶ್ವ ಕಡಲ ದಿನವನ್ನು ಆಚರಿಸುವುದು ಹೆಚ್ಚು ಅರ್ಥಪೂರ್ಣ ಎನ್ನುವುದು ಎಲ್ಲರ ಅಭಿಪ್ರಾಯ. ಕ್ರಿ.ಪೂ.3000 ಇಂಡಸ್ ವ್ಯಾಲಿ ನಾಗರಿಕತೆ ಪ್ರಾರಂಭವಾದ ಬಳಿಕದಿಂದಲೇ ಭರತ ಖಂಡದಲ್ಲಿ ಕಡಲ ಉದ್ಯಮಕ್ಕೆ ಭಾರತೀಯರು ಹೆಚ್ಚೆಚ್ಚು ಆಸಕ್ತರಾಗಿರುವುದು ಕಂಡು ಬರುತ್ತದೆ. ಅದಕ್ಕಾಗಿ ಅನಾದಿಕಾಲದಿಂದಲೇ ಭಾರತದಲ್ಲಿ ಹಡಗು ಕಟ್ಟುವ ಕಲೆ ಮತ್ತು ಅದೊಂದು ಉದ್ಯಮವಾಗಿಯೇ ಬೆಳೆದುಬರಲು ಭಾರತೀಯರು ಮನಸ್ಸು ಮಾಡಿದ್ದರು.
ಕಡಲು ಯಾರ ಆಸ್ತಿಯೂ ಅಲ್ಲದಿರುವುದರಿಂದ ಕಡಲ ಮೇಲೆ ಯಾರೂ ಕೂಡ ತಮ್ಮ ಅಧಿಪತ್ಯವನ್ನು ತೋರಿಸಲು ಇಲ್ಲಿಯ ತನಕ ಸಾಧ್ಯವಾಗಿಲ್ಲ. ಆದರೂ ಕಡಲ ತೀರದ ಮೇಲೆ ನಿರ್ದಿಷ್ಟ ದೂರದ ತನಕ ಆಯಾ ರಾಷ್ಟ್ರಗಳು ತಮ್ಮ ಹಕ್ಕನ್ನು ಹೊಂದುವುದಕ್ಕೆ ಅಂತರಾಷ್ಟ್ರೀಯ ಸಂಸ್ಥೆ ವ್ಯವಸ್ಥೆ ಮಾಡಿಕೊಟ್ಟಿದೆ. ಆದರೂ ಕಡಲ ಮೇಲೆ ಸಂಚರಿಸುವ ಹಡಗುಗಳ ಸುರಕ್ಷೆ, ಅಂತರಾಷ್ಟ್ರೀಯ ವ್ಯಾಪಾರ, ವಹಿವಾಟು ಮತ್ತು ನೌಕಾ ಸಿಬ್ಬಂದಿಯ ಚಟುವಟಿಕೆಗಳ ಮೇಲೆ ಕಣ್ಣಿಡಲು ಒಂದು ಕಾನೂನು ಮಾಡಲು ಅಂತರಾಷ್ಟ್ರೀಯ ಒಕ್ಕೂಟ ಯೋಜನೆ ರೂಪಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.