ನವದೆಹಲಿ: ನೇರ ತೆರಿಗೆ ಸುಧಾರಣೆಗಳ ಪ್ರಯಾಣವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ “ಪಾರದರ್ಶಕ ತೆರಿಗೆ – ಪ್ರಾಮಾಣಿಕರನ್ನು ಗೌರವಿಸುವುದು (“Transparent Taxation – Honoring the Honest” )” ವೇದಿಕೆಯನ್ನು ಪ್ರಾರಂಭಿಸಲಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ವಾಣಿಜ್ಯ ಮಂಡಳಿಗಳು, ವ್ಯಾಪಾರ ಸಂಘಗಳು, ಚಾರ್ಟರ್ಡ್ ಅಕೌಂಟೆಂಟ್ಗಳ ಸಂಘಗಳು ಮತ್ತು ಪ್ರಖ್ಯಾತ ತೆರಿಗೆದಾರರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಉಪಸ್ಥಿತರಿರಲಿದ್ದಾರೆ.
ಸಿಬಿಡಿಟಿ ಇತ್ತೀಚಿನ ವರ್ಷಗಳಲ್ಲಿ ನೇರ ತೆರಿಗೆಗಳಲ್ಲಿ ಹಲವಾರು ಪ್ರಮುಖ ತೆರಿಗೆ ಸುಧಾರಣೆಗಳನ್ನು ಮಾಡಿದೆ. ಕಳೆದ ವರ್ಷ ಕಾರ್ಪೊರೇಟ್ ತೆರಿಗೆ ದರವನ್ನು 30 ಪ್ರತಿಶತದಿಂದ 22 ಪ್ರತಿಶತಕ್ಕೆ ಮತ್ತು ಹೊಸ ಉತ್ಪಾದನಾ ಘಟಕಗಳಿಗೆ ದರಗಳನ್ನು 15 ಪ್ರತಿಶತಕ್ಕೆ ಇಳಿಸಲಾಯಿತು. ಡಿವಿಡೆಂಡ್ ವಿತರಣಾ ತೆರಿಗೆಯನ್ನೂ ರದ್ದುಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ತೆರಿಗೆ ಸುಧಾರಣೆಗಳ ಗಮನವು ತೆರಿಗೆ ದರಗಳನ್ನು ಕಡಿಮೆ ಮಾಡುವುದು ಮತ್ತು ನೇರ ತೆರಿಗೆ ಕಾನೂನುಗಳ ಸರಳೀಕರಣದ ಮೇಲೆ ಕೇಂದ್ರೀಕರಿಸಿದೆ. ಐಟಿ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ತರಲು ಸಿಬಿಡಿಟಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಹೊಸದಾಗಿ ಪರಿಚಯಿಸಲಾದ ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್ (ಡಿಐಎನ್) ಮೂಲಕ ಅಧಿಕೃತ ಸಂವಹನದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವುದು ಇದರಲ್ಲಿ ಸೇರಿದೆ, ಇದರಲ್ಲಿ ಇಲಾಖೆಯ ಪ್ರತಿಯೊಂದು ಸಂವಹನವು ಕಂಪ್ಯೂಟರ್ ರಚಿತ ಅನನ್ಯ ಡಾಕ್ಯುಮೆಂಟ್ ಗುರುತಿನ ಸಂಖ್ಯೆಯನ್ನು ಹೊಂದಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.