ಬೆಳ್ತಂಗಡಿ : ಪಂಡಿತಅಪ್ಪಾ ಭಟ್ ಮತ್ತು ಚಿತ್ಪಾವನ ಸಮಾಜ ಎಂಬ ಕೃತಿಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರಿಗೆ ಲೇಖಕ ಗೋವಿಂದ ಭಟ್ ದಾಮ್ಲೆ ಅವರು ಸಮರ್ಪಿಸಿದರು.
ಈ ಸಂದರ್ಭ ಡಾ|ಹೆಗ್ಗಡೆಯವರು ಹಿಂದಿನವರ ನೆನಪು ಮತ್ತು ದಾಖಲೀಕರಣ ಮಾಡಿರುವುದು ಶ್ಲಾಘನೀಯ ಕಾರ್ಯ. ಹಿರಿಯರ ಘನಕೆಲಸಗಳು ಇಂದಿನ ನಮಗೆ ಮತ್ತು ಮುಂದಿನವರಿಗೆ ಪ್ರೇರಣೆಯಾಗುತ್ತದೆ ಎಂದರಲ್ಲದೆ ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಲೇಖಕರನ್ನು ಸಮ್ಮಾನಿಸಿದರು.ಈ ಸಂದರ್ಭ ಕನ್ನಡ ಉಪನ್ಯಾಸಕ ಎಂ.ಪಿ.ಶ್ರೀನಾಥ್, ಭಾರತೀ ಪುಸ್ತಕ ಭಂಡಾರದ ಸಿ.ಎಂ.ಗೋಖಲೆ ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕಿನ ಶಿಶಿಲ ಸೀಮೆಯಲ್ಲಿ 1800.ನೇ ಇಸವಿಯ ಆದಿಯಲ್ಲಿ ಜನಸಿದ ಅಪ್ಪಾ ಭಟ್ ದಾಮಲೆ ಎಂಬುವರು ದೊಡ್ಡ ವೈದಿಕರು, ಜ್ಯೋತಿಷಿಗಳು, ದೇವಳದ ಸ್ಥಾಪಕ ಅರ್ಧ್ವರ್ಯು, ಪ್ರಕಾಂಡ ಪಂಡಿತರಾಗಿದ್ದರಲ್ಲದೆಅವರೊಬ್ಬ ಸಿದ್ದಿಪುರುಷರೂ ಹಾಗೂ ಅವಧೂತರೂಆಗಿದ್ದರು.
ಅಪ್ಪಾ ಭಟ್ಟರು ಶೃಂಗೇರಿ ಮಠ, ಮೈಸೂರು ಅರಮನೆಯ ನಿಕಟವರ್ತಿಗಳು. ಅವರ ಬಗ್ಗೆ ಪವಾಡವೆನಿಸುವ ಅನೇಕ ಕಥೆಗಳು, ಜನಮಾಸದಲ್ಲಿದ್ದವು. ಅವರ ಬಗ್ಗೆ ಪ್ರಚಲಿತದಲ್ಲಿದ್ದ ಕತೆಗಳನ್ನು, ಮಹಾರಾಷ್ಟ್ರದ ರತ್ನಾಗಿರಿಯಿಂದ ಅವಿಭಜಿತ ದಕ್ಷಿಣಕನ್ನಡದಲ್ಲಿ ಕಳೆದ ೩೫೦ ವರ್ಷಗಳಿಂದ ಇದ್ದ ಚಿತ್ಪಾವನ ಜನಾಂಗದ ಸಾಮಾನ್ಯ ಅವಲೋಕನವನ್ನು, ಒಂದು ದಶವಾದಿ ಕುಟುಂಬದ ಪರಿಚಯ ಹಾಗು ಹಿರಿಯರ ನೆನಪುಗಳನ್ನು ಶಿಕ್ಷಕ,ಲೇಖಕ ಗೋವಿಂದ ದಾಮ್ಲೆ ಯವರು ಹೊತ್ತಗೆಯಲ್ಲಿ ದಾಖಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.