ನವದೆಹಲಿ: ಭಾರತದ ಖಾಸಗಿ ಏರೋಸ್ಪೇಸ್ ವಲಯದಲ್ಲಿ ಸ್ಪೇಸ್ಎಕ್ಸ್ ಪ್ರಗತಿ ಸಾಧಿಸುತ್ತಾ ಮುನ್ನಡೆಯುತ್ತಿದ್ದು, ಭಾರತದ ಖಾಸಗಿ ಬಾಹ್ಯಾಕಾಶ ಸ್ಟಾರ್ಟ್-ಅಪ್ ಸ್ಕೈರೂಟ್ ಬುಧವಾರ ಮೇಲ್ ಹಂತದ ರಾಕೆಟ್ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಮಾಜಿ ಇಸ್ರೋ ವಿಜ್ಞಾನಿಗಳಾದ ಪವನ್ ಕುಮಾರ್ ಚಂದನಾ ಮತ್ತು ನಾಗ ಭಾರತ್ ಡಾಕಾ ಅವರು ಸ್ಥಾಪಿಸಿದ ಹೈದರಾಬಾದ್ ಮೂಲದ ಸ್ಟಾರ್ಟ್ಅಪ್ ಸ್ಕೈರೂಟ್ ಏರೋಸ್ಪೇಸ್, ವಿಕ್ರಮ್ -1 ಉಡಾವಣಾ ವಾಹನದ ಮೇಲಿನ ಹಂತದ ಎಂಜಿನ್-ರಾಮನ್ ಅನ್ನು ಉಡಾವಣೆಗೊಳಿಸುವಲ್ಲಿ ಯಶಸ್ವಿಯಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ.ರಾಮನ್ ಅವರ ಹೆಸರಿನಿಂದ ಈ ಎಂಜಿನ್ ಅನ್ನು ಸ್ಥಾಪಿಸಲಾಗಿದೆ.
ಸ್ಥಾಪನೆಯಾದ ಕೇವಲ ಎರಡು ವರ್ಷಗಳಲ್ಲಿ ಈ ಸ್ಟಾರ್ಟ್ಪ್ಅಪ್ ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಸ್ಕೈರೂಟ್ ಏರೋಸ್ಪೇಸ್ ಪ್ರಕಾರ, ಮಲ್ಟಿ-ಸ್ಟಾರ್ಟ್ ಸಾಮರ್ಥ್ಯವನ್ನು ಹೊಂದಿರುವ ಈ ನಾಲ್ಕು ರಾಮನ್ ಎಂಜಿನ್ಗಳು 3.4 ಕೆಎನ್ ಥರ್ಸ್ಟ್ ಉತ್ಪಾದಿಸುತ್ತವೆ ಮತ್ತು ಅನೇಕ ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಬಲ್ಲವು.
ಸ್ಕೈರೂಟ್ ರಾಕೆಟ್ಗಳ ಕುಟುಂಬವನ್ನು ನಿರ್ಮಿಸಲು ಯೋಜಿಸಿದೆ ಮತ್ತು 2021 ರ ಅಂತ್ಯದ ವೇಳೆಗೆ 250-700 ಕಿ.ಗ್ರಾಂ ಉಪಗ್ರಹಗಳನ್ನು ಕಡಿಮೆ ಭೂಮಿಯ ಕಕ್ಷೆಗೆ ಎಸೆಯಬಲ್ಲ ತನ್ನ ಮೊದಲ ರಾಕೆಟ್ ಅನ್ನು ಉಡಾವಣೆ ಮಾಡುವ ಗುರಿ ಹೊಂದಿದೆ. ಇದಕ್ಕಾಗಿ, ಸ್ಟಾರ್ಟ್ ಅಪ್ ತನ್ನ ‘ವಿಕ್ರಮ್’ ಶ್ರೇಣಿಯ ರಾಕೆಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ ಹೂಡಿಕೆದಾರರಿಂದ ಸುಮಾರು 31.5 ಕೋಟಿ ರೂ.ಸಂಗ್ರಹ ಮಾಡಿದೆ. ರಾಕೆಟ್ಗಳ ಕುಟುಂಬಕ್ಕೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಸ್ಥಾಪಕ – ವಿಕ್ರಮ್ ಸಾರಾಭಾಯ್ ಹೆಸರಿಡಲಾಗಿದೆ.
No better day than Dr. Vikram Sarabhai’s birthday to announce our successful test firing of our Vikram-1 Launch vehicle’s upper stage Engine-Raman.
Four Raman engines with multi-start capability produce a thrust of 3.4kN and inserts multiple satellites into orbit. pic.twitter.com/uF9ETTBSTc
— Skyroot Aerospace (@SkyrootA) August 12, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.