ನವದೆಹಲಿ: ಮಿಜೋರಾಂನ ಶಾಸಕ ಝಡ್. ಆರ್ ಥಿಯಾಮ್ಸಂಗಾ ಅವರು ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗರ್ಭಿಣಿಗೆ ಹೆರಿಗೆ ಮಾಡಿಸಿ ರಕ್ಷನಾಗಿದ್ದಾರೆ. ಮಹಿಳೆಗೆ ಅವರು ಸಿಝೇರಿಯನ್ ನಡೆಸಿ ಮಗುವನ್ನು ಹೊರಗೆ ತೆಗೆದಿದ್ದಾರೆ. ಈ ಮೂಲಕ ಮಹಿಳೆ ಮತ್ತು ಆಕೆಯ ಗಂಡು ಮಗುವನ್ನು ಸುರಕ್ಷಿತವಾಗಿಸಿದ್ದಾರೆ.
62 ವರ್ಷದ ಶಾಸಕರಾಗಿರುವ ಥಿಯಾಮ್ಸಂಗಾ ಅವರು ಅರ್ಹ ವೈದ್ಯ ಕೂಡ ಹೌದು. ಈ ಹಿಂದೆಯೂ ಅವರು ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚಿ ಅನೇಕರ ಜೀವ ಉಳಿಸಿದ್ದಾರೆ.
ಮಿಜೋ ನ್ಯಾಷನಲ್ ಫ್ರಾಂಟ್ ಶಾಸಕರಾಗಿರುವ ಅವರು ಮಂಗಳವಾರ, 39 ವರ್ಷದ ಮಹಿಳೆ ಮತ್ತು ಅವರ ನವಜಾತ ಶಿಶುವನ್ನು ಉಳಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸಿದ್ದಾರೆ.
ಸೋಮವಾರ ದೂರದ ಚಂಪೈ ಜಿಲ್ಲೆಯ ಕರೋನವೈರಸ್ ಪೀಡಿತ ಮತ್ತು ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗರ್ಭಿಣಿ ಮಹಿಳೆಗೆ ತೀವ್ರವಾಗಿ ಮತ್ತು ಗಂಭೀರ ಸ್ಥಿತಿಯಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ತಿಳಿದುಕೊಂಡರು, ರಾಜ್ಯದ ಚಂಪೈ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರು ಇಲ್ಲದ ಕಾರಣ ಮಹಿಳೆಯ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಶಾಸಕರು ಅಲ್ಲಿಗೆ ಧಾವಿಸಿ ಮಹಿಳೆಗೆ ಸಿಝೇರಿಯನ್ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಥಿಯಾಮ್ಸಂಗಾ 1985 ರಲ್ಲಿ ಎಂಬಿಬಿಎಸ್ ಪದವಿ ಪಡೆದರು ಮತ್ತು 1995 ರಲ್ಲಿ ಮಣಿಪುರದ ಇಂಫಾಲ್ನಲ್ಲಿರುವ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಔಷಧದಲ್ಲಿ ಡಾಕ್ಟರೇಟ್ ಪಡೆದರು. ಅವರು ಮೇ 2018 ರಲ್ಲಿ ಐಜಾಲ್ ಸಿವಿಲ್ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.