ನವದೆಹಲಿ: ಭಾರತವನ್ನು ಜಾಗತಿಕವಾಗಿ ಪ್ರಮುಖ ಅಪ್ಲಿಕೇಶನ್ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಒಂದಾಗಿಸಲು ಸರ್ಕಾರದ ಮಟ್ಟದಿಂದ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ʼಆತ್ಮನಿರ್ಭರ ಭಾರತ ಆ್ಯಪ್ ಇನ್ನೋವೇಶನ್ ಚಾಲೆಂಜ್ʼ ಅನ್ನು ನಡೆಸಲಾಗಿತ್ತು. ಈ ಚಾಲೆಂಜ್ ವಿಜೇತರನ್ನು ಒಂಬತ್ತು ವಿಭಾಗಗಳಲ್ಲಿ ಘೋಷಿಸಲಾಗಿದೆ.
ಕಿರು ವಿಡಿಯೋ ಅಪ್ಲಿಕೇಶನ್ ಚಿಂಗಾರಿ, ಸುದ್ದಿ ಅಪ್ಲಿಕೇಶನ್ ಲಾಜಿಕಲಿ ಮತ್ತು ಆರೋಗ್ಯ ಅಪ್ಲಿಕೇಶನ್ ಸ್ಟೆಪ್ಸೆಟ್ಗೊ ತಮ್ಮ ವಿಭಾಗಗಳಲ್ಲಿ ಉನ್ನತ ಪ್ಲೇಯರ್ ಆಗಿ ಹೊರಹೊಮ್ಮಿದೆ.
ಜುಲೈ 4 ರಂದು ಪ್ರಧಾನಿ ನರೇಂದ್ರ ಮೋದಿ ಅವರು “ಆತ್ಮನಿರ್ಭರ ಭಾರತ್ ಆ್ಯಪ್ ಇನ್ನೋವೇಶನ್ ಚಾಲೆಂಜ್” ಅನ್ನು ಪ್ರಾರಂಭಿಸಿದರು, ದೇಶಾದ್ಯಂತದ 6,940 ಟೆಕ್ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್ ಗಳು ಇದರಲ್ಲಿ ಭಾಗಿಯಾದವು.
ಸವಾಲು, ವ್ಯವಹಾರ, ಇ-ಲರ್ನಿಂಗ್, ಮನರಂಜನೆ, ಆಟಗಳು, ಆರೋಗ್ಯ, ಸುದ್ದಿ, ಕಚೇರಿ ಮತ್ತು ವರ್ಕ್ ಫ್ರಂ ಹೋಮ್ ಮತ್ತು ಸಾಮಾಜಿಕ ಎಂಬ ಒಂಬತ್ತು ವಿಭಿನ್ನ ವಿಭಾಗಗಳಿಗೆ ನಮೂದುಗಳನ್ನು ಇದು ಹೊಂದಿತ್ತು.
ಮೆಗಾ ಹ್ಯಾಕಥಾನ್ ಅನ್ನು ಶುಕ್ರವಾರ ಆಯೋಜಿಸಲಾಗಿದ್ದು, ಅಲ್ಲಿ ವಿಭಾಗಗಳಾದ್ಯಂತ ಚಾಲೆಂಜ್ ಅಡಿಯಲ್ಲಿ ಆಯ್ಕೆಯಾದ ಉನ್ನತ ಫೈನಲಿಸ್ಟ್ಗಳು ತಮ್ಮ ಅಪ್ಲಿಕೇಶನ್ಗಳನ್ನು ಪ್ರದರ್ಶಿಸಿದರು.
ಸಾಮಾಜಿಕ ವಿಭಾಗದಲ್ಲಿ, ಚಿಂಗಾರಿ ಅಗ್ರ ವಿಜೇತನಾಗಿ ಹೊರಹೊಮ್ಮಿತು, ನಂತರ ಯುವರ್ ಕೋಟ್ ಮತ್ತು ಕೂ ಅಪ್ಲಿಕೇಶನ್ ಸ್ಥಾನ ಪಡೆದಿದೆ.
ವ್ಯಾಪಾರ ವಿಭಾಗದಲ್ಲಿ, ಮೊದಲ ವಿಜೇತರಲ್ಲಿ Zoho Invoice, Books & Expense; Mall 91; and GimBooks — Easy Invoice Manager ಸೇರಿವೆ.
ಇ-ಲರ್ನಿಂಗ್ ವಿಭಾಗವು ಮೂರು ವಿಜೇತರನ್ನು ಹೊಂದಿದೆ. ಡಿಸ್ಪ್ರಜ್, ಕುಟುಕಿ ಕಿಡ್ಸ್ ಲರ್ನಿಂಗ್ ಅಪ್ಲಿಕೇಶನ್ ಮತ್ತು ಹಲೋ ಇಂಗ್ಲಿಷ್ ಕ್ರಮವಾಗಿ ಮೊದಲ, ಎರಡನೆಯ ಮತ್ತು ಮೂರನೇ ಸ್ಥಾನಗಳನ್ನು ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.