ನವದೆಹಲಿ: ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಪತ್ತೆಹಚ್ಚಲು ಅಭಿವೃದ್ಧಿಪಡಿಸಿದ ಆರೋಗ್ಯ ಸೇತು ಆ್ಯಪ್ ಇಲ್ಲಿಯವರೆಗೆ 15 ಕೋಟಿ ಡೌನ್ಲೋಡ್ಗಳನ್ನು ದಾಖಲಿಸಿದೆ. ಜನರ ದೊಡ್ಡ ಬೆಂಬಲದಿಂದಾಗಿ ಆರೋಗ್ಯ ಸೇತು ವಿಶ್ವದಾದ್ಯಂತ ಹೆಚ್ಚು ಡೌನ್ಲೋಡ್ ಮಾಡಲಾದ ಕೋವಿಡ್ -19 ಕಾಂಟ್ಯಾಕ್ಟ್ ಟ್ರೇಸಿಂಗ್ ಅಪ್ಲಿಕೇಶನ್ ಆಗಿದೆ. ಸರ್ಕಾರದಿಂದ ಉತ್ತೇಜಿಸಲ್ಪಟ್ಟ ಈ ಅಪ್ಲಿಕೇಶನ್ ಪ್ರಾರಂಭವಾದ ಮೂರು ತಿಂಗಳಲ್ಲಿ ಈ ಸಾಧನೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ವರದಿಯ ಪ್ರಕಾರ, ಆರೋಗ್ಯ ಸೇತು ಇಲ್ಲಿಯವರೆಗೆ ಹೆಚ್ಚು ಇನ್ಸ್ಟಾಲ್ಗಳನ್ನು ಕಂಡಿದೆ. ಇದರ ನಂತರ ಟರ್ಕಿಯ ಸಾಂಕ್ರಾಮಿಕ ಐಸೋಲೇಷನ್ ಟ್ರ್ಯಾಕಿಂಗ್ ಪ್ರಾಜೆಕ್ಟ್ ಮತ್ತು ಜರ್ಮನಿಯ ಕೊರೋನಾ-ವಾರ್ನ್-ಅಪ್ಲಿಕೇಶನ್ ಸ್ಥಾನ ಪಡೆದುಕೊಂಡಿದೆ. ಡೌನ್ಲೋಡ್ ಸಂಖ್ಯೆಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್ನ ಅಂಕಿ ಅಂಶಗಳನ್ನು ಒಳಗೊಂಡಿವೆ.
ಈ ಆ್ಯಪ್ ಕೊರೋನಾ ಸೋಂಕಿತರು ನಮ್ಮ ಸುತ್ತಮುತ್ತಲಲ್ಲಿ ಇದ್ದ ಪಕ್ಷದಲ್ಲಿ ನಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಆ ಮೂಲಕ ನಾವು ಸೋಂಕಿತರ ಸಂಪರ್ಕ ಮಾಡದಂತೆ ಅಥವಾ ಸೋಂಕು ಅಂಟಿಸಿಕೊಳ್ಳದಂತೆ ಇದು ನಮ್ಮನ್ನು ಕಾಪಾಡುತ್ತದೆ. ನಮ್ಮ ಮೊಬೈಲ್ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ನಿಂದ ಈ ದೇಶೀಯ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ ಕೊರೋನಾ ಕಪಿಮುಷ್ಟಿಯಿಂದ ಪಾರಾಗುವುದಕ್ಕೆ ಇದು ನಮಗೆ ಸಹಕರಿಸುತ್ತದೆ.
ಇನ್ನು ಈ ಆ್ಯಪ್ ಬಳಕೆಗೆ ಬಂದ 13 ದಿನಗಳಲ್ಲಿಯೇ 5 ಕೋಟಿಗೂ ಅಧಿಕ ಡೌನ್ಲೋಡ್ಗಳನ್ನು ಕಂಡಿತ್ತು. ಆ್ಯಪ್ನಲ್ಲಿ ಸಾಮಾನ್ಯ ಜನರಿಗೂ ಬಳಕೆಗೆ ಸುಲಭವಾಗುವ ದೃಷ್ಟಿಯಿಂದ ಪ್ರಾದೇಶಿಕ ಭಾಷೆಗಳನ್ನೂ ಅಳವಡಿಸಲಾಗಿದೆ. ಜೊತೆಗೆ ಕೊರೋನಾ ಲಕ್ಷಣಗಳನ್ನು ಸ್ವಯಂ ಟೆಸ್ಟ್ ಮಾಡಿಕೊಳ್ಳುವುದಕ್ಕೂ ಇಲ್ಲಿ ಅವಕಾಶ ಇರುವ ಕಾರಣ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳುವ ಮೂಲಕ ಕೋವಿಡ್ ಟೆಸ್ಟ್ ಮಾಡುವ ಪ್ರಮೇಯವಿಲ್ಲ. ಆರೋಗ್ಯ ತೀರಾ ಹದೆಗೆಟ್ಟಾಗ ಮಾತ್ರವೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಕೊಂಡರೆ ಸಾಕು. ಅಷ್ಟರ ಮಟ್ಟಿಗೆ ಈ ಆ್ಯಪ್ ನಮಗೆ ಸಹಾಯ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.