ಶಿಮ್ಲಾ: ಭಾರತ ತನ್ನ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಕೆಲವು ದಿನಗಳು ಇರುವಂತೆ, ಹೊಸದಾಗಿ ಆಗಮಿಸಿದ ರಫೇಲ್ ಯುದ್ಧವಿಮಾನಗಳು ಹಿಮಾಚಲ ಪ್ರದೇಶದ ಆಕಾಶದ ಮೇಲೆ ಹಾರಾಡುವ ಮೂಲಕ ರಾತ್ರಿಯ ವೇಳೆ ತನ್ನ ಶೌರ್ಯವನ್ನು ಪ್ರದರ್ಶಿಸಿವೆ.
ವರದಿಗಳ ಪ್ರಕಾರ, ಭಾರತವು ಪ್ರಸ್ತುತ ಚೀನಾದೊಂದಿಗೆ ಗಡಿ ವಿವಾದದಲ್ಲಿ ತೊಡಗಿರುವ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ)ನಲ್ಲಿ ವಿಮಾನವು ಸುರಕ್ಷಿತ ಅಂತರವನ್ನು ಇಟ್ಟುಕೊಂಡು ಹಾರಾಟವನ್ನು ನಡೆಸಿದೆ. ಆದರೂ, ರಫೇಲ್ ಯುದ್ಧ ವಿಮಾನದ ರಾತ್ರಿ ಹಾರಾಟವು ಭಾರತೀಯ ವಾಯುಪಡೆಯ ಬಗ್ಗೆ ಚೀನಾದ ಸೈನ್ಯಕ್ಕೆ ಬಲವಾದ ಸಂದೇಶಗಳನ್ನು ಕಳುಹಿಸಿಕೊಟ್ಟಿದೆ ಎಂಬುದರಲ್ಲಿ ಅನುಮಾನವಿಲ್ಲ.
ಜುಲೈ 29 ರಂದು ಮೊದಲ ಬ್ಯಾಚ್ನ ಐದು ರಫೇಲ್ ಜೆಟ್ಗಳ ಆಗಮನವು ಚೀನಾ ಮತ್ತು ಪಾಕಿಸ್ಥಾನದೊಂದಿಗಿನ ಉದ್ವಿಗ್ನತೆಯ ಸಂದರ್ಭದಲ್ಲಿ ಭಾರತದ ವಾಯು ಶಕ್ತಿಗೆ ಕಾರ್ಯತಾಂತ್ರಿಕ ಬಲವನ್ನು ನೀಡಿದೆ.
ರಫೇಲ್ ವಿಮಾನವು ಪ್ರಬಲವಾದ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಐಎಎಫ್ ತನ್ನ ಮುಂಚೂಣಿಯ ಫೈಟರ್ ಜೆಟ್ಗಳಾದ ಸುಖೋಯ್ 30 ಎಂಕೆಐ, ಜಾಗ್ವಾರ್ ಮತ್ತು ಮಿರಾಜ್ 2000 ವಿಮಾನಗಳನ್ನು ಪೂರ್ವ ಲಡಾಖ್ನ ಪ್ರಮುಖ ಗಡಿ ವಾಯುನೆಲೆಗಳಲ್ಲಿ ಮತ್ತು ಎಲ್ಎಸಿಯ ಇತರ ನಿರ್ಣಾಯಕ ಸ್ಥಳಗಳಲ್ಲಿ ನಿಯೋಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.