ನವದೆಹಲಿ: ಕೊರೋನಾ ಕಾರಣದಿಂದಾಗಿ ವಿದೇಶದಲ್ಲಿ ಸಿಲುಕಿ ಹಾಕಿಕೊಂಡ ಸುಮಾರು ಒಂದು ಮಿಲಿಯನ್ ಭಾರತೀಯರು ವಂದೇ ಭಾರತ್ ಮಿಷನ್ ಅಡಿಯಲ್ಲಿ ದೇಶಕ್ಕೆ ಮರಳಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಮಾಹಿತಿ ನೀಡಿದ್ದಾರೆ. 130 ಸಾವಿರಕ್ಕೂ ಹೆಚ್ಚು ಜನರು ಭಾರತದಿಂದ ವಿವಿಧ ದೇಶಗಳಿಗೆ ಈ ಮಿಷನ್ ಅಡಿಯಲ್ಲಿ ಹಾರಿದ್ದಾರೆ ಎಂದಿದ್ದಾರೆ.
ಟ್ವಿಟ್ ಮಾಡಿರುವ ಪುರಿ, “ವಂದೇ ಭಾರತ್ ಮಿಷನ್ ಅಡಿಯಲ್ಲಿ ಸುಮಾರು ಒಂದು ಮಿಲಿಯನ್ ಸಿಲುಕಿ ಹಾಕಿಕೊಂಡ ಭಾರತೀಯರು ವಿವಿಧ ವಿಧಾನಗಳ ಮೂಲಕ ಮರಳಿದ್ದಾರೆ ಮತ್ತು 130 ಸಾವಿರಕ್ಕೂ ಹೆಚ್ಚು ಜನರು ಭಾರತದಿಂದ ವಿವಿಧ ದೇಶಗಳಿಗೆ ಹಾರಿದ್ದಾರೆ. ನಮ್ಮ ಜನರ ಆಕಾಂಕ್ಷೆಗಳಿಂದ ಪ್ರೇರಿತವಾದ ಈ ಮಿಷನ್ ತೊಂದರೆಗೀಡಾದ ನಾಗರಿಕರ ವಾಪಸಾತಿ ಮತ್ತು ಹೊರಹೋಗುವ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತಿದೆ” ಎಂದಿದ್ದಾರೆ.
ಆಗಸ್ಟ್ 9ರಂದು 6,000 ಕ್ಕೂ ಹೆಚ್ಚು ಜನರು ವಿಶ್ವದಾದ್ಯಂತದಿಂದ ಭಾರತಕ್ಕೆ ಮರಳಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದ್ದಾರೆ.
ಕೊರೋನಾವೈರಸ್ ನಿರ್ಬಂಧದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ವಂದೇ ಭಾರತ್ ಮಿಷನ್ ಮೇ ಆರಂಭದಲ್ಲಿ ಪ್ರಾರಂಭವಾಯಿತು.
Nearly one million stranded Indians have returned through various modes under VBM & more than 130K have flown to various countries.
Driven by the aspirations of our people, the mission continues to facilitate repatriation & outbound travel of stranded & distressed citizens. pic.twitter.com/dRHqaup0L5
— Hardeep Singh Puri (@HardeepSPuri) August 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.