ನವದೆಹಲಿ: ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ನಡೆಯಲಿರುವ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆಯಲು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದವು ಬಿಡ್ ಮಾಡುವ ನಿರೀಕ್ಷೆ ಇದೆ.
ಚೀನಾದ ಮೊಬೈಲ್ ತಯಾರಕ ವಿವೋ ನಿರ್ಗಮಿಸಿದ ನಂತರ ಐಪಿಎಲ್ನ ಶೀರ್ಷಿಕೆ ಪ್ರಾಯೋಜಕತ್ವ ಖಾಲಿ ಇದೆ. ಪತಂಜಲಿ ತನ್ನ ಆಯುರ್ವೇದ ಎಫ್ಎಂಸಿಜಿ ಉತ್ಪನ್ನಗಳನ್ನು ರಫ್ತು ಮಾಡುವತ್ತ ಗಮನ ಹರಿಸುತ್ತಿದೆ. ಕೇಂದ್ರದ ಕ್ರಮಗಳು ಅನೇಕ ದೈತ್ಯ ಸಂಸ್ಥೆಗಳಿಗೆ ಜಾಗತಿಕ ಮಾರುಕಟ್ಟೆ ವೇದಿಕೆಯನ್ನು ರಚಿಸಲು ಸಹಾಯ ಮಾಡಿದೆ.
ಈ ಬೆಳವಣಿಗೆಯನ್ನು ದೃಢೀಕರಿಸಿದ ಪತಂಜಲಿ ವಕ್ತಾರ ಎಸ್.ಕೆ. ತಿಜರಾವಾಲಾ ಅವರು, “ನಾವು ಬಿಡ್ ಮಾಡುವ ಬಗ್ಗೆ ಪರಿಗಣಿಸುತ್ತಿದ್ದೇವೆ. ಇದು ಸ್ಥಳೀಯತೆಗೆ ಧ್ವನಿಯಾಗಲಿದೆ ಮತ್ತು ಒಂದು ಭಾರತೀಯ ಬ್ರಾಂಡ್ ಅನ್ನು ಜಾಗತಿಕವಾಗಿ ಮಾಡಲು ಇದು ಸರಿಯಾದ ವೇದಿಕೆಯಾಗಿದೆ. ನಾವು ಆ ದೃಷ್ಟಿಕೋನವನ್ನು ಪರಿಗಣಿಸುತ್ತಿದ್ದೇವೆ. ನಾವು ಅಂತಿಮ ನಿರ್ಧಾರ ಇನ್ನಷ್ಟೇ ತೆಗೆದುಕೊಳ್ಳಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
ಶೀರ್ಷಿಕೆ ಪ್ರಾಯೋಜಕತ್ವವು ಐಪಿಎಲ್ನ ವಾಣಿಜ್ಯ ಆದಾಯದ ಮಹತ್ವದ ಭಾಗವಾಗಿದೆ, ಅದರಲ್ಲಿ ಅರ್ಧದಷ್ಟು ಭಾಗವನ್ನು ಫ್ರಾಂಚೈಸಿಗಳು ಸಮಾನವಾಗಿ ಹಂಚಿಕೊಳ್ಳುತ್ತಾರೆ. ವಿವೋ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು 2018 ರಿಂದ 2022 ರವರೆಗೆ ಐದು ವರ್ಷಗಳ ಕಾಲ 2,190 ಕೋಟಿ ರೂ., ವಾರ್ಷಿಕ ಅಂದಾಜು 440 ಕೋಟಿ ರೂ.ಗೆ ಪಡೆದುಕೊಂಡಿತ್ತು.
ಹರಿದ್ವಾರ ಮೂಲದ ಪತಂಜಲಿ ಸಮೂಹವು ಸುಮಾರು 10,500 ಕೋಟಿ ರೂ. ವಹಿವಾಟು ಅನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.