ಬೆಂಗಳೂರು: ಇಂಧನದ ಉಳಿತಾಯ, ಮಿತ ಬಳಕೆಯ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಿರುವ ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆ ಬಿಎಂಟಿಸಿ ಹೊಸತೊಂದು ಪ್ರಯತ್ನಕ್ಕೆ ಮುಂದಾಗಿದೆ. ಬಸ್ಸುಗಳ ಮುಂಭಾಗದಲ್ಲಿ ಸೈಕಲ್ ಇರಿಸುವ ಸ್ಟ್ಯಾಂಡ್ ಒಂದನ್ನು ಅಳವಡಿಸಿಕೊಳ್ಳುವ ಮೂಲಕ ಜನರಲ್ಲಿ ಸೈಕಲ್ ಪ್ರಯಾಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನವೀನ ಪ್ರಯತ್ನವನ್ನು ಮಾಡಿದೆ.
ಈ ಯೋಜನೆಯ ಸಾಧ್ಯತೆ ಭಾದ್ಯತೆಗಳನ್ನು ಪರಿಶೀಲಿಸುವ ಸಲುವಾಗಿ ಪ್ರಾಯೋಗಿಕವಾಗಿ ಒಂದು ಬಸ್ನಲ್ಲಿ ಈಗಾಗಲೇ ಸೈಕಲ್ ಸ್ಟ್ಯಾಂಡ್ ಅನ್ನು ಅಳವಡಿಸಲಾಗಿದ್ದು, ಆ ಮೂಲಕ ಜನರಲ್ಲಿ ಸೈಕಲ್ ಅನ್ನು ಬಳಕೆ ಮಾಡಿ ಪ್ರಯಾಣ ನಡೆಸುವುದಕ್ಕೆ ಅನುಕೂಲ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ಗಳಲ್ಲಿ ಸೈಕಲ್ ಸ್ಟ್ಯಾಂಡ್ ಅಳವಡಿಸಿ ಸೈಕಲ್ ಯಾನಿಗಳಿಗೆ ಸೈಕಲ್ಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡುಹೋಗಲು ವ್ಯವಸ್ಥೆ ಕಲ್ಪಿಸುವುದಾಗಿಯೂ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಾಗಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಟ್ವೀಟ್ ಮಾಡಿದ್ದು, ಬಿಎಂಟಿಸಿ ಬಸ್ಗಳಲ್ಲಿ ಸೈಕಲ್ ರೇಕ್ಗಳನ್ನು ಅಳವಡಿಸುವ ಹೊಸದೊಂದು ಕ್ರಾಂತಿಗೆ ಸಾರಿಗೆ ಇಲಾಖೆ ಚಾಲನೆ ನೀಡಿದೆ. ಆ ಮೂಲಕ ಸಮೂಹ ಸಾರಿಗೆ ಹಾಗೂ ಇಂಧನದ ಮಿತ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಸಾರ್ವಜನಿಕರು ಈ ವ್ಯವಸ್ಥೆಯನ್ನು ಉತ್ತಮವಾಗಿ ಬಳಸಿಕೊಳ್ಳಲಿದ್ದಾರೆ ಎನ್ನುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಇಂಧನ ಉಳಿತಾಯದ ಜನಜಾಗೃತಿಗೆ ಬಿಎಂಟಿಸಿ ಅಳವಡಿಸಿಕೊಂಡಿರುವ ಈ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಸೂಕ್ತ ಸ್ಪಂದನೆ ದೊರೆತರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಜೊತೆಗೆ ಇಂಧನ ಉಳಿತಾಯಕ್ಕೂ ಇದು ದಾರಿಯಾಗಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಬಿಎಂಟಿಸಿ ಬಸ್ ಗಳಲ್ಲಿ ಸೈಕಲ್
ರ್ಯಾಕ್ ಗಳನ್ನು ಅಳವಡಿಸುವ, ಹೊಸದೊಂದು ಕ್ರಾಂತಿಗೆ
ಸಾರಿಗೆ ಇಲಾಖೆ ಚಾಲನೆ ನೀಡಿದೆ.ಈ ಮೂಲಕ ಸಮೂಹ ಸಾರಿಗೆ, ಹಾಗೂ ಇಂಧನದ ಮಿತ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ.
ಸಾರ್ವಜನಿಕರು ಈ ವ್ಯವಸ್ಥೆಯನ್ನು ಉತ್ತಮವಾಗಿ ಬಳಸಿಕೊಳ್ಳಲಿದ್ದಾರೆ ಎನ್ನುವ ಭರವಸೆ ಇದೆ pic.twitter.com/5lMrljWzTO
— Laxman Sangappa Savadi | ಲಕ್ಷ್ಮಣ್ ಸಂಗಪ್ಪ ಸವದಿ (@LaxmanSavadi) August 9, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.