ನವದೆಹಲಿ: ರಾಜ್ಘಾಟ್ ಬಳಿ ನಿರ್ಮಿಸಲಾಗಿರುವ ಸ್ವಚ್ಛ ಭಾರತ್ ಮಿಷನ್ನ ಸಂವಾದ ಕೇಂದ್ರವಾದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಪ್ರಧಾನಿ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿದರು.
ಮಹಾತ್ಮಾ ಗಾಂಧಿ ಅವರ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವದ ಅಂಗವಾಗಿ ರಾಜ್ಘಾಟ್ ಬಳಿಯ ಗಾಂಧೀಜಿ ಅವರ ಸಮಾಧಿಯ ಸಮೀಪವೇ ಈ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ.
ಈ ಸಂದರ್ಭ ಮಾತನಾಡಿರುವ ಮೋದಿ, ಜನರ ಬದುಕಿನ ಭಾಗವಾಗಿ ಬದಲಾದ ಸ್ವಚ್ಛ ಭಾರತ ಮಿಷನ್ ಎಂಬ ಪರಿಕಲ್ಪನೆಯ ಬಗ್ಗೆ ಈ ಕೇಂದ್ರ ಮುಂದಿನ ಜನಾಂಗಕ್ಕೆ ಮಾಹಿತಿ ನೀಡಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಸ್ವಚ್ಛತೆಯ ಕುರಿತಂತೆ ಜನರಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿಯೂ ಈ ಕೇಂದ್ರ ಮಹತ್ವ ಪಡೆಯಲಿದೆ ಎಂದು ತಿಳಿಸಿದ್ದಾರೆ.
ಸ್ವಚ್ಛ ಭಾರತದ ಬಗ್ಗೆ ಜನರಿಗೆ ಸಂವಾದಾತ್ಮಕ ಮಾಹಿತಿ ಸಂಗ್ರಹಣೆ, ಈ ಯೋಜನೆಯ ಯಶಸ್ಸಿನ ಹಿನ್ನೆಲೆ, ಕಥೆಗಳನ್ನು ತಿಳಿದುಕೊಳ್ಳುವಲ್ಲಿಯೂ ಈ ಕೇಂದ್ರ ಮಹತ್ವ ಪಡೆಯಲಿದೆ ಎಂದು ಅವರು ಹೇಳಿದ್ದಾರೆ. ಈ ಕೇಂದ್ರದ ಮೂಲಕ ತಂತ್ರಜ್ಞಾನ ಮತ್ತು ಹೊರಾಂಗಣ ವಿಚಾರನ್ನೊಳಗೊಂಡಂತೆ ಸ್ವಚ್ಛ ಭಾರತ ಮಿಷನ್ನ ಸಂಪೂರ್ಣ ಚಿತ್ರಣವನ್ನು ಯುವಜನಾಂಗಕ್ಕೆ ನೀಡುವಲ್ಲಿಯೂ ಪೂರಕವಾಗಿ ಕೆಲಸ ಮಾಡಲಿದೆ ಎಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.