ನವದೆಹಲಿ: ಭಾರತೀಯ ಮತ್ತು ಚೀನೀ ಸೇನೆಗಳ ಹಿರಿಯ ಮೇಜರ್ ಜನರಲ್ಗಳು ಪೂರ್ವ ಲಡಾಖ್ನ ದೌಲತ್ ಬೇಗ್ ಓಲ್ಡಿಯ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ನಲ್ಲಿ ಸಭೆ ನಡೆಸುತ್ತಿದ್ದಾರೆ.
ದೌಲತ್ ಬೇಗ್ ಓಲ್ಡಿಯಲ್ಲಿ ಭಾರತೀಯ ಮತ್ತು ಚೀನಾದ ಸೈನ್ಯಗಳ ನಡುವೆ ಪ್ರಮುಖ ಮಟ್ಟದ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಪ್ ಕಮಾಂಡರ್ ಮಟ್ಟದಲ್ಲಿ ನಡೆದ ಐದು ಸುತ್ತಿನ ಸಭೆಗಳ ನಂತರ ಇಂದಿನ ಪ್ರಮುಖ ಸಭೆಯನ್ನು ನಡೆಸಲಾಗುತ್ತಿದೆ. ಮೇ ಮಧ್ಯ ಭಾಗದಲ್ಲಿ ಆರಂಭವಾದ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಬಳಿಕ ನಡೆದ ಅತ್ಯುನ್ನತ ಮಟ್ಟದ ಸಭೆಗಳು ಇದಾಗಿದೆ.
3 ಪರ್ವತ ವಿಭಾಗದ ಜನರಲ್ ಕಮಾಂಡಿಂಗ್ ಮೇಜರ್ ಜನರಲ್ ಅಭಿಜಿತ್ ಬಾಪತ್ ಅವರು ಭಾರತದ ನಿಯೋಗದ ಮುಖ್ಯಸ್ಥರಾಗಿದ್ದಾರೆ ಎಂದು ಹೇಳಲಾಗಿದೆ.
ಡೆಪ್ಸಾಂಗ್ ಬಯಲು ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಪರಿಹರಿಸುವುದು ಮಾತುಕತೆಯ ಮುಖ್ಯ ಕಾರ್ಯಸೂಚಿಯಾಗಿದೆ. ಡೆಪ್ಸಾಂಗ್ ವಿರುದ್ಧ ದಿಕ್ಕಿನಲ್ಲಿ 15,000 ಕ್ಕೂ ಹೆಚ್ಚು ಚೀನೀ ಪಡೆಗಳು ನಿಯೋಜನೆಗೊಂಡಿದೆ ಎಂದು ಹೇಳಲಾಗಿದೆ.
ಲಡಾಖ್ನ ಉತ್ತರದಲ್ಲಿರುವ ಡೆಪ್ಸಾಂಗ್ನ ಕಾರ್ಯತಾಂತ್ರಿಕ ಪ್ರಾಮುಖ್ಯತೆಯೇ ಚೀನಿಯರು ನಿರಂತರವಾಗಿ ತೊಂದರೆ ಉಂಟುಮಾಡಲು ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ. 2013 ಮತ್ತು 2014 ರಲ್ಲಿ ಕೂಡ ಇಲ್ಲಿ ಎರಡು ಗಂಭೀರ ಉದ್ವಿಗ್ನತೆಗಳು ಕಂಡು ಬಂದಿದ್ದವು.
ಚೀನಾದ ಸೈನ್ಯವು ಟ್ಯಾಂಕ್, ಫಿರಂಗಿ ಬಂದೂಕುಗಳನ್ನು ಇಲ್ಲಿ ನಿಯೋಜಿಸಿದೆ ಮತ್ತು ಡೆಪ್ಸಾಂಗ್ ವಿರುದ್ಧ ದಿಕ್ಕಿನಲ್ಲಿ ಸೈನ್ಯವನ್ನು ನಿಯೋಜಿಸಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ಸೇನೆಯೂ ಇದೇ ರೀತಿಯ ನಿಯೋಜನೆಗಳನ್ನು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.