ನವದೆಹಲಿ: ಇಂಡಿಯಾ ಟುಡೆ-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮುಂದಿನ ಪ್ರಧಾನ ಮಂತ್ರಿಯಾಗಿ ಅಭ್ಯರ್ಥಿ ಸ್ಥಾನಕ್ಕೆ ಅತ್ಯಂತ ಜನಪ್ರಿಯ ಆಯ್ಕೆಯಾಗಿ ಉಳಿದಿದ್ದಾರೆ.
ಇತ್ತೀಚಿನ MOTN ಸಮೀಕ್ಷೆಯಲ್ಲಿ, ಶೇಕಡಾ 66 ರಷ್ಟು ಜನರು ನರೇಂದ್ರ ಮೋದಿಯವರು ಭಾರತದ ಮುಂದಿನ ಪ್ರಧಾನಿಯಾಗಬೇಕು ಎಂದು ಆಶಿಸಿದ್ದಾರೆ. ಶೇ .8 ರಷ್ಟು ಮತಗಳನ್ನು ಪಡೆದ ರಾಹುಲ್ ಗಾಂಧಿ ಅವರು ಜನರ ಎರಡನೇ ಆಯ್ಕೆಯಾಗಿದ್ದರೆ, ಸೋನಿಯಾ ಗಾಂಧಿ ಶೇ 5 ರಷ್ಟು ಮತಗಳನ್ನು ಪಡೆದು ಪ್ರಧಾನಿ ಹುದ್ದೆಗೆ ಮೂರನೇ ಸ್ಥಾನದಲ್ಲಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥ ಮಾಯಾವತಿ, ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನೂ ಒಂದಿಷ್ಟು ಜನ ಮುಂದಿನ ಪ್ರಧಾನಿಯಾಗಿ ನೋಡ ಬಯಸಿದ್ದಾರೆ.
ಜನವರಿ 2020 ರ ಸಮೀಕ್ಷೆಯಲ್ಲೂ, ಪ್ರಧಾನಿ ನರೇಂದ್ರ ಮೋದಿಯವರನ್ನು ಜನರು ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಿದ್ದರು. ಆಗ ಪ್ರಧಾನಿ ಮಂತ್ರಿ ಮತ್ತು ರಾಹುಲ್ ಗಾಂಧಿ ನಡುವೆ 40 ಶೇಕಡಾ ಪಾಯಿಂಟ್ ಅಂತರವಿತ್ತು. ಆಗ ಶೇಕಡಾ 53 ರಷ್ಟು ಜನರು ಮುಂದಿನ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರನ್ನು ಹೆಸರಿಸಿದ್ದರೆ, ಕೇವಲ 13 ಪ್ರತಿಶತದಷ್ಟು ಜನರು ಮಾತ್ರ ರಾಹುಲ್ ಗಾಂಧಿ ದೇಶವನ್ನು ಮುನ್ನಡೆಸಲು ಸೂಕ್ತರು ಎಂದು ಹೇಳಿದ್ದರು. ಇದೀಗ ಮೋದಿ ಅದಕ್ಕಿಂತಲೂ ಹೆಚ್ಚಿನ ಜನ ಮತ ಹಾಕಿದ್ದಾರೆ.
MOTN ಸಮೀಕ್ಷೆಯನ್ನು ದೆಹಲಿ ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಜುಲೈ 15, 2020 ಮತ್ತು ಜುಲೈ 27, 2020 ರ ನಡುವೆ ನಡೆಸಿತು.
ಈ ಸಮೀಕ್ಷೆಯನ್ನು ಸಾಂಪ್ರದಾಯಿಕವಾಗಿ ಮುಖಾಮುಖಿ ಸಂದರ್ಶನ ವಿಧಾನವನ್ನು ಬಳಸಿ ನಡೆಸಲಾಗುತ್ತದೆ. ಆದರೆ, ಸಮೀಕ್ಷೆಯ ಈ ಆವೃತ್ತಿಯಲ್ಲಿ ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ಪರಿಸ್ಥಿತಿಯಿಂದಾಗಿ, ಎಲ್ಲಾ ಸಂದರ್ಶನಗಳನ್ನು ದೂರವಾಣಿ ಮೂಲಕ ಪ್ರಮಾಣಿತ ರಚನಾತ್ಮಕ ಪ್ರಶ್ನಾವಳಿಯನ್ನು ಬಳಸಿ ನಡೆಸಲಾಗಿದೆ, ಇದನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.