ನವದೆಹಲಿ: ಇತ್ತೀಚೆಗಷ್ಟೇ ಕೋವಿಡ್-19 ಗೆ ನೀಡುವ ಲಸಿಕೆಯೊಂದನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಸಿದ್ಧಪಡಿಸಿದ್ದು, ಈ ಲಸಿಕೆಯನ್ನು ಭಾರತದಲ್ಲಿ 225 ರೂ. ಗಳಿಗೆ ನೀಡಲಾಗುವುದು ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಿಳಿಸಿದೆ.
ವರದಿಗಳ ಪ್ರಕಾರ, ಆಕ್ಸ್ಫರ್ಡ್ ಜೊತೆಗೆ ಕೊರೋನಾ ಲಸಿಕೆ ಉತ್ಪಾದನೆಯ ಪಾಲುದಾರಿಕೆಯನ್ನೂ ಈ ಸಂಸ್ಥೆ ಹೊಂದಿದ್ದು, ವಿಶ್ವವಿದ್ಯಾಲಯ ತಯಾರಿಸಿರುವ ಲಸಿಕೆಯನ್ನು ಭಾರತದಲ್ಲಿ ಕಡಿಮೆ ಬೆಲೆಗೆ ನೀಡಲಿರುವುದಾಗಿ ತಿಳಿಸಿದೆ. ಆಸ್ಟ್ರಾಜೆನೆಕಾ ಲೈಸೆನ್ಸ್ ಹೊಂದಿರುವ ಆಕ್ಸ್ಫರ್ಡ್ ವಿವಿಯ ಈ ಲಸಿಕೆ ಭಾರತವೂ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿಯೂ ಕ್ಲಿನಿಕಲ್ ಪ್ರಯೋಗಗಳನ್ನು ಮುಂದುವರಿಸುತ್ತಿದೆ ಎಂದು ಸೀರಂ ಮಾಹಿತಿ ನೀಡಿದೆ.
2021ರ ವೇಳೆಗೆ ಈ ಲಸಿಕೆ ಕೊರೋನಾ ರೋಗಿಗಳ ಚಿಕಿತ್ಸೆಗೆ ಬಳಕೆಗೆ ಲಭ್ಯವಾಗಲಿದೆ ಎಂದೂ ಸಂಸ್ಥೆ ಮಾಹಿತಿ ನೀಡಿದೆ. ಭಾರತವೂ ಸೇರಿದಂತೆ ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಿಗೆ 100 ಮಿಲಿಯನ್ ಡೋಸ್ ಗಳಷ್ಟು ಲಸಿಕೆಗಳನ್ನು ತಯಾರಿಸಲು ಬಿಲ್ ಹಾಗೂ.ಮೆಲಿಂಡಾ ಗೇಟ್ಸ್ ಫೌಂಡೇಶನ್ ಧನ ಸಹಾಯ ಒದಗಿಸಲಿದ್ದು, 150 ಮಿಲಿಯನ್ ಡಾಲರ್ ಹಣವನ್ನು ಒದಗಿಸಲಿರುವುದಾಗಿಯೂ ಸೀರಮ್ ಸಂಸ್ಥೆ ಮಾಹಿತಿ ನೀಡಿದೆ.
ಆಕ್ಸ್ಫರ್ಡ್ನ ಆಸ್ಟ್ರೆಜೆನೆಕ್ ಹಾಗೂ ನೊವಾವಾಕ್ಸ್ ಲಸಿಕೆಗಳಿಗೆ ಜಗತ್ತಿನ 92 ರಾಷ್ಟ್ರಗಳಲ್ಲಿ 3 ಡಾಲರ್ ಬೆಲೆ ನಿಗದಿ ಮಾಡಿ ಲಭ್ಯವಾಗಿಸುವ ನಿಟ್ಟಿನಲ್ಲಿಯೂ ಚಿಂತನೆಯೂ ನಡೆಯುತ್ತಿದೆ ಎಂಬುದಾಗಿ ಸೀರಮ್ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.