ಬೆಂಗಳೂರು: ಭಾರತದ ಮೊದಲ ಮಾನವ ಸಹಿತ ಗಗನಯಾನ ಯೋಜನೆಯಲ್ಲಿ ಭಾಗವಹಿಸಲಿರುವ ನಾಲ್ವರು ಯಾನಿಗಳು ರಷ್ಯಾದಲ್ಲಿನ ತಮ್ಮ ತರಬೇತಿಯನ್ನು ಮುಗಿಸಿದ್ದಾರೆ ಎಂದು ರಷ್ಯಾದ ಗ್ಲಾವ್ಕಾಸ್ಮೋಸ್ ಸಂಸ್ಥೆ ಮಾಹಿತಿ ನೀಡಿದೆ.
ರಷ್ಯಾದ ಬಾಹ್ಯಾಕಾಶ ಕೇಂದ್ರ ರಾಸ್ಕಾಸ್ಮೋಸ್ನ ಅಧೀನ ಸಂಸ್ಥೆಯಾಗಿರುವ ಗ್ಲಾವ್ಕಾಸ್ಮೋಸ್ ನಲ್ಲಿ ಈ ನಾಲ್ಕೂ ಜನ ಗಗನಯಾತ್ರಿಗಳಿಗೆ ತರಬೇತಿ ನೀಡಲಾಗುತ್ತಿತ್ತು. ಇವರ ಆರೋಗ್ಯ ಉತ್ತಮವಾಗಿದ್ದು, ತರಬೇತಿಯನ್ನು ಮುಂದುವರೆಸಲು ಬಯಸುತ್ತಿದ್ದಾರೆ ಎಂದೂ ಸಂಸ್ಥೆ ಹೇಳಿದೆ.
ಈ ಯಾತ್ರಿಗಳಿಗೆ ಫೆಬ್ರವರಿ, ಜೂನ್, ಜುಲೈ ತಿಂಗಳಿಗೆ ಸಂಬಂಧಿಸಿದಂತೆ ಅಬ್ನಾರ್ಮಲ್ ಡೀಸೆಂಡ್ ಮಾಡ್ಯೂಲ್ ಲ್ಯಾಂಡಿಂಗ್ ಪರೀಕ್ಷೆಯ ಮೂರು ಹಂತಗಳ ಕಡಿಮೆ ಅವಧಿಯ ತರಬೇತಿಯನ್ನು ನೀಡಲಾಗಿದೆ. ಜೂನ್ನಲ್ಲಿ ಈ ಯಾತ್ರಿಗಳಿಗೆ IL-76MDK ಎಂಬ ಲ್ಯಾಬೊರೇಟರಿ ಏರ್ಕ್ರಾಫ್ಟ್ ವೈಟ್ಲೆಸ್ನೆಸ್ ಮೋಡ್ನ ವಿಶೇಷವಾದ ತರಬೇತಿ ನೀಡಲಾಗಿದೆ. ಇದೀಗ ಅಗತ್ಯವಿರುವ ಪೂರಕ ತರಬೇತಿಗಳಲ್ಲಿ ಯಾತ್ರಿಗಳು ತೊಡಗಿಸಿಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಈ ನಾಲ್ಕೂ ಜನ ಗಗನಯಾತ್ರಿಗಳು ಭಾರತೀಯ ವಾಯುಪಡೆಯ ಫೈಟರ್ ಪೈಲಟ್ಗಳಾಗಿದ್ದಾರೆ. 2022 ರಲ್ಲಿ ಉಡಾವಣೆಯಾಗಲಿರುವ ಗಗನ ಯಾನದ ಸಂಭಾವ್ಯ ಯಾತ್ರಿಗಳಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.