ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಕ್ಟೋಬರ್ನಲ್ಲಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ. ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆ ಸೇರಿದಂತೆ ಭಾರತ ಮತ್ತು ರಷ್ಯಾ ನಡುವೆ ಹಲವಾರು ಉನ್ನತ ಮಟ್ಟದ ವಿನಿಮಯಗಳು ಈ ವೇಳೆ ನಡೆಯಲಿವೆ.
ಇತ್ತೀಚೆಗೆ ಉಭಯ ಪಕ್ಷಗಳು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ.
“ಉಭಯ ದೇಶಗಳ ನಡುವೆ ಮುಂಬರುವ ಉನ್ನತ ಮಟ್ಟದ ವಿನಿಮಯದ ಪೂರ್ಣ ದಿನಾಂಕಗಳು ಸಿದ್ಧವಾಗುತ್ತಿವೆ. ಎಸ್ಸಿಒ ಮತ್ತು ಬ್ರಿಕ್ಸ್ ವಿದೇಶಾಂಗ ಮಂತ್ರಿಗಳ ಸಭೆಗಳು, ಎನ್ಎಸ್ಎಗಳ ಸಭೆ, ರಕ್ಷಣಾ ಮಂತ್ರಿಗಳ ಸಭೆ ನಿಗದಿಯಾಗಿದೆ. ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆ ಅಕ್ಟೋಬರ್ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ನಡೆಯುವ ನಿರೀಕ್ಷೆಯಿದೆ “ಎಂದು ಶ್ರೀವಾಸ್ತವ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 2 ರಂದು ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ರಷ್ಯಾದಲ್ಲಿ ಸಾಂವಿಧಾನಿಕ ತಿದ್ದುಪಡಿಗಳ ಕುರಿತ ರಾಷ್ಟ್ರೀಯ ಮತದಾನದ ಯಶಸ್ವಿಗಾಗಿ ಅಭಿನಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
“ನಂತರ ಜೂನ್ ಕೊನೆಯ ವಾರದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೋಗೆ ಭೇಟಿ ನೀಡಿದ್ದರು. ಎರಡನೇ ವಿಶ್ವಯುದ್ಧದಲ್ಲಿ ವಿಜಯದ 75 ನೇ ವಾರ್ಷಿಕೋತ್ಸವದಲ್ಲಿ ಭಾರತೀಯ ಮಿಲಿಟರಿ ತಂಡವು ಇಲ್ಲಿ ನಡೆದ ಪೆರೇಡ್ನಲ್ಲಿ ಭಾಗವಹಿಸಿತ್ತು” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.