ನವದೆಹಲಿ: ಭಾರತೀಯ ರೈಲ್ವೆ ಆಗಸ್ಟ್ 7 ರಂದು ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಪುರ ನಡುವೆ ದೇಶದ ಮೊದಲ ಕಿಸಾನ್ ವಿಶೇಷ ಪಾರ್ಸೆಲ್ ರೈಲನ್ನು ಓಡಿಸಲಿದೆ.
ವರದಿಗಳ ಪ್ರಕಾರ, ದೇವಲಾಲಿಯಿಂದ ರೈಲು ಆಗಸ್ಟ್ 7ರಂದು ಬೆಳಿಗ್ಗೆ 11 ಗಂಟೆಗೆ ಸಂಚಾರವನ್ನು ಪ್ರಾರಂಭಿಸಲಿದ್ದು, ಮರುದಿನ ಸಂಜೆ 6.45 ಕ್ಕೆ ದಾನಾಪುರ ತಲುಪಲಿದೆ. ಸುಮಾರು 32 ಗಂಟೆಗಳಲ್ಲಿ 1519 ಕಿಲೋಮೀಟರ್ ದೂರವನ್ನು ಇದು ಕ್ರಮಿಸುತ್ತದೆ. ರೈಲು ತರಕಾರಿಗಳು, ಹಣ್ಣುಗಳು ಇತ್ಯಾದಿಗಳನ್ನು ಹೊತ್ತೊಯ್ಯಲಿದೆ, ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಮಾಡುತ್ತದೆ. ಇದು ಸಾಮಾನ್ಯ ಪ್ರಯಾಣಿಕರನ್ನು ಸಾಗಿಸುವುದಿಲ್ಲ. ಪಾರ್ಸೆಲ್ ರೈಲುಗಳು 10 +1 ಬೋಗಿಗಳ ಸಂಯೋಜನೆಯನ್ನು ಹೊಂದಿರುತ್ತದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಾರ್ಸೆಲ್ ರೈಲಿಗೆ ಚಾಲನೆಯನ್ನು ನೀಡಲಿದ್ದಾರೆ.
2020-21ರ ಕೇಂದ್ರ ಬಜೆಟ್ ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಿಸಾನ್ ರೈಲು ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದರು.
ಹಾಲು, ಮಾಂಸ ಮತ್ತು ಮೀನುಗಳನ್ನು ಒಳಗೊಂಡಂತೆ ಹಾಳಾಗುವ ವಸ್ತುಗಳಿಗೆ ತಡೆರಹಿತ ರಾಷ್ಟ್ರೀಯ ಕೋಲ್ಡ್ ಸಪ್ಲೈ ಸರಪಳಿಯನ್ನು ನಿರ್ಮಿಸಲು ಪಿಪಿಪಿ ಮಾದರಿಯ ಮೂಲಕ ಭಾರತೀಯ ರೈಲ್ವೆ ಕಿಸಾನ್ ರೈಲನ್ನು ಆರಂಭಿಸಿದೆ. ಈ ಎಕ್ಸ್ಪ್ರೆಸ್ ಮತ್ತು ಸರಕು ರೈಲಿನಲ್ಲಿ ಶೈತ್ಯೀಕರಿಸಿದ ಬೋಗಿಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.