ಮಂಗಳೂರು: ಇಲ್ಲಿನ ಸಂಘನಿಕೇತನದಲ್ಲಿ ಗುರುನಮನ, ಸನಾತನ ಸಂಸ್ಕಾರ ಚಿಂತನ ಕಾರ್ಯಕ್ರಮವು ಆ.2ರಂದು ಬೆಳಗ್ಗೆ 9ರಿಂದ ರಾತ್ರಿ 8.30ರ ವರೆಗೆ ನಡೆಯಲಿದೆ.
ಕಾರ್ಯಕ್ರಮವನ್ನು ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಕೆ. ರಘುವೀರ್ ಕಾಮತ್, ನಾಟ್ಯಾಚಾರ್ಯ ಕೆ. ಮುರಳೀಧರ್ ರಾವ್, ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಭಾಗವಹಿಸಲಿದ್ದಾರೆ.
ಉಳ್ಳಾಲ ಮೋಹನ್ ಕುಮಾರ್ ಹಾಗೂ ಮುರಳೀಧರ ರಾವ್ ಅವರ ಶಿಷ್ಯರಾಗಿರುವ ನೃತ್ಯ ಗುರು ಶಾರದಾಮಣಿ ಶೇಖರ್ ಇವರು ಸುಮಾರು 36 ವರ್ಷಗಳಿಂದ ನೃತ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ 14 ಶಿಷ್ಯರು ರಂಗಪ್ರವೇಶ ಹಾಗೂ ಗುರುವಂದನೆಗೈದಿದ್ದು, ಇವರ 11 ಶಿಷ್ಯೆಯಂದಿರು ನಾಟ್ಯ ಗುರುಗಳಾಗಿ ಮತ್ತು 18 ಶಿಷ್ಯೆಯರು ದೂರದರ್ಶನ ಕಲಾವಿದರಾಗಿ ಆಯ್ಕೆಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ವಾಗ್ಮಿಯಾಗಿರುವ ಚಕ್ರವರ್ತಿ ಸೂಲಿಬೆಲೆ, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಡಾ| ಅನುಸೂಯ ದೇವಿ, ಭಗಿನಿ ಧನ್ಯತಾ ಇವರಿಂದ ಉಪನ್ಯಾಸ ನಡೆಯಲಿದೆ. ಸಂಜೆ 5 ಗಂಟೆಯಿಂದ ಭರತನಾಟ್ಯ ಮತ್ತಿತರ ನಾಟ್ಯ ವೈವಿಧ್ಯ ನಡೆಯಲಿದೆ. ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎನ್. ವಿನಯ ಹೆಗ್ಡೆ, ಶ್ರೀಮತಿ ಸುಜಾತಾ ವಿ. ಹೆಗ್ಡೆ, ಕುಂಬ್ಳೆ ಸುಂದರ್ ರಾವ್ ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.