ಮುಂಬೈ: ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡುವ ಫವಿಪಿರವಿರ್ ಮಾತ್ರೆಯನ್ನು ಭಾರತದಲ್ಲಿ ಕೇವಲ 35 ರೂ. ಗಳಿಗೆ ಮಾರಾಟ ಮಾಡಲು ಔಷಧ ತಯಾರಕ ಸಂಸ್ಥೆ ಸನ್ ಫಾರ್ಮಾಸೆಟಿಕಲ್ ಇಂಡಸ್ಟ್ರಿ ನಿರ್ಧರಿಸಿದ್ದು, ಈ ಔಷಧಗಳು ಈ ವಾರದಿಂದಲೇ ತೊಡಗಿದಂತೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿರುವುದಾಗಿಯೂ ತಿಳಿಸಿದೆ.
ಫ್ಲೂಗಾರ್ಡ್ ಎಂಬ ಬ್ರಾಂಡ್ ಹೆಸರಿನಲ್ಲಿ ಕೊರೋನಾ ಸೋಂಕಿತರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಈ ಮಾತ್ರೆಯನ್ನು ನೀಡಲಾಗುತ್ತಿದ್ದು, ಅತೀ ಕಡಿಮೆ ಬೆಲೆಗೆ ಭಾರತದಲ್ಲಿಯೂ ಇದು ಲಭ್ಯವಾಗಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಹೆಚ್ಚಿನ ರೋಗಿಗಳಿಗೆ ಸುಲಭ ದರದಲ್ಲಿ ಈ ಔಷಧವನ್ನು ದೊರೆಯುವಂತೆ ಮಾಡಲು ಕೈಗೆಟುಕುವ ದರದಲ್ಲಿ ಇದನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಸಿಇಒ ಕೀರ್ತಿ ಗಾನೋರ್ಕರ್, ಈ ಸಾಂಕ್ರಾಮಿಕ ರೋಗದಿಂದ ಭಾರತವನ್ನು ಹೊರತರಲು ಸಂಸ್ಥೆ ಕಡಿಮೆ ಬೆಲೆಗೆ ಮಾತ್ರೆಗಳನ್ನು ಪೂರೈಕೆ ಮಾಡಲು ಚಿಂತಿಸಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ 50,000 ರಷ್ಟು ಕೊರೋನಾ ರೋಗಿಗಳು ಪ್ರತಿನಿತ್ಯ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಚಿಕಿತ್ಸೆಗೆ ಪೂರಕವಾದ ಅಗತ್ಯತೆಗಳನ್ನು ಒದಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗೆ ಅನುಕೂಲ ಮಾಡಿಕೊಡುವುದಕ್ಕೂ ಈ ಕ್ರಮ ಪೂರಕವಾಗಲಿದೆ ಎಂದು ಅವರು ಹೇಳಿದ್ದಾರೆ.
ಫ್ಲೂಗಾರ್ಡ್ ಅನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸುವ ಮೂಲಕ ಸಂಸ್ಥೆ ಸರ್ಕಾರ ಮತ್ತು ವೈದ್ಯಕೀಯ ಸಿಬ್ಬಂದಿಗಳ ಜೊತೆಗೆ ಕೈಜೋಡಿಸಲಿರುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.