ಶ್ರೀನಗರ: ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಗಡಿಯನ್ನು ಕಾಯಲು ಮಹಿಳಾ ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಕಾಶ್ಮೀರ ಮತ್ತು ಗಡಿ ನಿಯಂತ್ರಣ ರೇಖೆಯ ಸಮೀಪ ಗಡಿಯನ್ನು ಕಾಯಲು ಅಸ್ಸಾಂ ರೈಫಲ್ಸ್ ಪಡೆಯ ಮಹಿಳಾ ಸೈನಿಕರನ್ನು ನಿಯೋಜನೆ ಮಾಡಲಾಗಿದೆ
ವರದಿಗಳ ಪ್ರಕಾರ, ‘ರೈಫಲ್ ವುಮೆನ್’ಗಳನ್ನು ಗಡಿ ಕಾಯಲು ದೈನಂದಿನ ಕರ್ತವ್ಯಕ್ಕಾಗಿ ನಿಯೋಜನೆ ಮಾಡುತ್ತಿರುವುದು ಇತಿಹಾಸದಲ್ಲೇ ಇದು ಮೊದಲು.
ಸಮುದ್ರ ಮಟ್ಟದಿಂದ 10000 ಅಡಿ ಎತ್ತರದ ಪ್ರದೇಶದಲ್ಲಿರುವ ಎಲ್ಒಸಿಯ ಸಾಧನಾ ಪಾಸ್ ಪ್ರದೇಶದಲ್ಲಿ ಸುಮಾರು ಆರು ಮಂದಿ ಮಹಿಳಾ ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಅಸ್ಸಾಂ ರೈಫಲ್ಸ್ ಪಡೆಯ ಸೈನಿಕರು ಇವರಾಗಿದ್ದು, ಭಾರತೀಯ ಸೇನೆಯ ನಿಯೋಜನೆ ಮೇರೆಗೆ ಇಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಹೊಸದಾಗಿ ನಿಯೋಜನೆಗೊಂಡಿರುವ ಮಹಿಳಾ ಸೈನಿಕರು ತಮ್ಮ ಕರ್ತವ್ಯದ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ. ಮಾದಕ ವಸ್ತುಗಳ ಕಳ್ಳಸಾಗಣೆ, ನಕಲಿ ನೋಟುಗಳ ಕಳ್ಳಸಾಗಣೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗೆ ಸಾಧನಾ ಪಾಸ್ ಕುಖ್ಯಾತಿ ಪಡೆದುಕೊಂಡಿದೆ. ಇದನ್ನು ನಿರ್ವಹಿಸುವ ಜವಾಬ್ದಾರಿ ಮಹಿಳೆಯರ ಮೇಲಿದೆ.
ಈ ಪ್ರದೇಶದಲ್ಲಿ ಸುಮಾರು 40 ಗ್ರಾಮಗಳಿದ್ದು, ಸಾಧನಾ ಪಾಸ್ ಮೂಲಕ ಈ ಗ್ರಾಮಕ್ಕೆ ಆಗಮಿಸುವ ಎಲ್ಲಾ ವಾಹನಗಳು ಕಾಶ್ಮೀರದ ಒಂದು ಭಾಗಕ್ಕೆ ಪ್ರವೇಶವನ್ನು ಪಡೆಯುತ್ತದೆ. ಹೀಗಾಗಿ ಈ ಮಹಿಳೆಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.