ಅಯೋಧ್ಯೆ: ಹಿಂದೂಗಳ ಆರಾಧ್ಯ ದೈವ ಭಗವಾನ್ ಶ್ರೀ ರಾಮನ ಭವ್ಯ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ. ಇನ್ನೊಂದು ಕಡೆ ಅಯೋಧ್ಯೆ ನಗರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಗ್ರಾಮವೊಂದರಲ್ಲಿ ಬರೋಬ್ಬರಿ 251 ಮೀಟರ್ ಎತ್ತರದ ಭಗವಾನ್ ಶ್ರೀ ರಾಮನ ಭವ್ಯ ಪ್ರತಿಮೆ ನಿರ್ಮಾಣವಾಗಲಿದೆ.
ವರದಿಗಳ ಪ್ರಕಾರ, ಉತ್ತರಪ್ರದೇಶದ ಮಂಜ್ಹಾ ಬರೆತ ಎಂಬ ಗ್ರಾಮದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣವಾಗಲಿದೆ ಮತ್ತು ಇದನ್ನು ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣ ಮಾಡಲಾಗುತ್ತಿದೆ.
ಚೀನಾದ ಗೌತಮ ಬುದ್ಧ ಪ್ರತಿಮೆ ಮತ್ತು ಗುಜರಾತಿನ ವಡೋದರದಲ್ಲಿನ 182 ಅಡಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗಿಂತಲೂ ಶ್ರೀರಾಮನ ಪ್ರತಿಮೆ ಅತಿ ದೊಡ್ಡದಾಗಿರಲಿದೆ.
ಪ್ರತಿಮೆ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ. ಸರಯೂ ನದಿ ತಟದಲ್ಲಿ ಪ್ರತಿಮೆ ನಿರ್ಮಾಣವಾಗಲಿದೆ.
251 ಮೀಟರ್ ಎತ್ತರದ ಪ್ರತಿಮೆ 50 ಮೀಟರ್ ಎತ್ತರದ ಅಡಿಪಾಯದ ಮೇಲೆ ನಿಲ್ಲಲಿದೆ. ಹೀಗಾಗಿ ಪ್ರತಿಮೆಯ ಒಟ್ಟು ಉದ್ದ 301 ಮೀಟರ್ ಇರಲಿದೆ. ಇದರಲ್ಲಿ ಮ್ಯೂಸಿಯಂ ಇರಲಿದೆ. ವಿಷ್ಣುವಿನ ವಿವಿಧ ಅವತಾರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಒಂದು ಡಿಜಿಟಲ್ ಮ್ಯೂಸಿಯಂ ಕೂಡ ಇದರಲ್ಲಿ ನಿರ್ಮಾಣವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.